ಪುಂಜಾಲಕಟ್ಟೆ: ಕರುನಾಡ ಸ್ಪೈಡರ್‌ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ರವರು ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟವನ್ನು ಮಾ. 23ರಂದು ಬೆಳಿಗ್ಗೆ ಸಕಲ ಸಿದ್ಧತೆಯೊಂದಿಗೆ ಹತ್ತಲಿದ್ದಾರೆ.
ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಬೆಟ್ಟ ಹತ್ತಲು ಎಲ್ಲಾ ರೀತಿಯ ಅನುಮತಿ ದೊರಕಿದೆ, ಬೆಳ್ತಂಗಡಿ ಜನತೆಯ ಸಹಕಾರ ಬೇಕು ಎಂದು ಸ್ವತಃ ಜ್ಯೋತಿರಾಜ್ ಅವರು ಸುದ್ದಿ ಬಿಡುಗಡೆ ಕಚೇರಿಗೆ ಬಂದು ತಿಳಿಸಿದ್ದಾರೆ.