Site icon Suddi Belthangady

ಜೀವ ವಿಮಾ ಕಂಪೆನಿ ಎಸ್‌.ಬಿ.ಐ ಲೈಫ್‌ನ 1095ನೇ ಶಾಖೆ ಶುಭಾರಂಭ

ಬೆಳ್ತಂಗಡಿ: ಚರ್ಚ್ ರೋಡ್ ಸರ್ಕಲ್ ಬಳಿ ಇರುವ ವೈಭವ್ ಆರ್ಕೇಡ್‌ನ ಮೊದಲ ಮಹಡಿಯಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ ಜೀವ ವಿಮಾ ಕಂಪನಿಗಳಲ್ಲಿ ಒಂದಾಗಿರುವ ಜೀವ ವಿಮಾ ಕಂಪೆನಿ ಎಸ್‌.ಬಿ.ಐ ಲೈಫ್‌ನ 1095ನೇ ಶಾಖೆ ಮಾ.21ರಂದು ಶುಭಾರಂಭಗೊಂಡಿತು.

ನೂತನ ಎಸ್‌.ಬಿ.ಐ ಬ್ರಾಂಚ್ ಇದರ ನೂತನ ಶಾಖೆಯ ಉದ್ಘಾಟನೆಯನ್ನು ಲೈಫ್ ಇನ್ಶೂರೆನ್ಸ್ ಸಂಸ್ಥೆಯ ಬೆಂಗಳೂರಿನ ರೀಜನಲ್ ಡೈರೆಕ್ಟರ್ ಅಶ್ವನಿ ಕುಮಾರ್ ಶುಕ್ಲ ನೆರವೇರಿಸಿದರು.

ಎಸ್‌.ಬಿ.ಐ ಬೆಂಗಳೂರಿನ ರೀಜನಲ್ ಡೈರೆಕ್ಟರ್ ಅಶ್ವನಿ ಕುಮಾರ್ ಶುಕ್ಲ ಮಾತನಾಡಿ ಪ್ರತೀ ವರ್ಷ 200-300 ಶಾಖೆಗಳನ್ನು ತೆರೆಯುತ್ತಾ ಯಶಸ್ವಿ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಎರಡು ಹೊತ್ತು ಊಟಕ್ಕೂ ಕಷ್ಟ ಪಡುತ್ತಿದ್ದ ವ್ಯಕ್ತಿ ಇಂದು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆದು ಸುಭದ್ರ ಜೀವನ ನಡೆಸುತ್ತಿದ್ದಾನೆ ಎಂದರೆ ಅದು ಎಸ್‌.ಬಿ.ಐ ಲೈಫ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ನೀಡುವ ವಿಭಿನ್ನ ಅವಕಾಶಗಳಿಂದ ಮಾತ್ರ ಸಾಧ್ಯ. ಕೆಲಸದಲ್ಲಿ ಶ್ರಮಪಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಶುಭಹಾರೈಸಿದರು.

ಲೈಫ್ ಇನ್ಶೂರೆನ್ಸ್ ಸಂಸ್ಥೆಯು ಅಕ್ಟೋಬರ್ 2000 ಇಸವಿಯಲ್ಲಿ ಸ್ಥಾಪಿತಗೊಂಡು ಮಾ.2001ರಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಐ.ಆರ್‌.ಡಿ.ಎ.ಐ) ನೋಂದಾಯಿಸಲ್ಪಟ್ಟಿದೆ. ಎಸ್‌.ಬಿ.ಐ ಲೈಫ್‌ನ ತನ್ನ ವೈವಿಧ್ಯಮಯ ಉತ್ಪನ್ನಗಳಾದ ರಕ್ಷಣೆ, ಪಿಂಚಣಿ, ಉಳಿತಾಯ ಮತ್ತು ಆರೋಗ್ಯ ಪರಿಹಾರಗಳ ಮೂಲಕ ಭಾರತದಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಸೇವೆ ಸಲ್ಲಿಸುವಲ್ಲಿ ಯಶಸ್ವಿಯಾಗಿದೆ.

“ಗ್ರಾಹಕ ಮೊದಲು” ಎಂಬ ಮನೋಭಾವದಿಂದ ಪ್ರೇರಿತವಾಗಿರುವ ಎಸ್‌.ಬಿ.ಐ ಲೈಫ್ ಸಂಸ್ಥೆಯು ವಿಶ್ವ ದರ್ಜೆಯ ಕಾರ್ಯಾಚರಣಾ ದಕ್ಷತೆಯನ್ನು ಕಾಪಾಡಿಕೊಂಡು ಮತ್ತು ಉನ್ನತ ನೈತಿಕ ಮಾನದಂಡಗಳನ್ನು ಅನುಸರಿಸುವ ಮೂಲಕ ತನ್ನ ಗ್ರಾಹಕರಿಗೆ ತೊಂದರೆ-ಮುಕ್ತ ಕ್ಲೈಮ್ ಇತ್ಯರ್ಥ ಅನುಭವವನ್ನು ಒದಗಿಸಲು ಹೆಚ್ಚಿನ ಮಹತ್ವ ನೀಡಿರುತ್ತದೆ. ಅದಲ್ಲದೆ ಎಸ್‌.ಬಿ.ಐ ಲೈಫ್ ತನ್ನ ಗ್ರಾಹಕರು, ವಿತರಕರು ಮತ್ತು ಉದ್ಯೋಗಿಗಳಿಗೆ ಡಿಜಿಟಲ್ ಅನುಭವಗಳನ್ನು ಒದಗಿಸಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಕಾಲ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ನವೀಕರಣತೆಯನ್ನು ಅಳವಡಿಸಿಕೊಂಡು ಬಂದಿದೆ. ಗ್ರಾಹಕರಿಗೆ ಸಮರ್ಪಕವಾದ ಸೇವೆಗಳನ್ನು ನೀಡುವುದರ ಜೊತೆಗೆ ಕಂಪನಿಯು ತನ್ನ ಉದ್ಯೋಗಿಗಳಿಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಸಾಧನೆ ಮಾಡಲು ಆರೋಗ್ಯಕರ ಮತ್ತು ಹೊಂದಿಕೊಳ್ಳುವ ಕೆಲಸದ ವಾತಾವರಣವನ್ನು ಒದಗಿಸುತ್ತಿದೆ.

ಎಸ್‌.ಬಿ.ಐ ಲೈಫ್ ಸಮಾಜಕ್ಕೆ ಹಿಂತಿರುಗಿಸುವ ಸಂಸ್ಕೃತಿಯನ್ನು ಬಲವಾಗಿ ಪ್ರೋತ್ಸಾಹಿಸುತ್ತಿದೆ. ಅದಲ್ಲದೆ ಮಕ್ಕಳ ಶಿಕ್ಷಣ, ಆರೋಗ್ಯ ರಕ್ಷಣೆ, ವಿಪತ್ತು ಪರಿಹಾರ ಮತ್ತು ಪರಿಸರ ಸುಧಾರಣೆ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ್ದು 2023 – 24ರಲ್ಲಿ ವಿವಿಧ ಸಿ.ಎಸ್‌.ಆರ್ ಮಧ್ಯಸ್ಥಿಕೆಗಳ ಮೂಲಕ 1.05ಲಕ್ಷಕ್ಕೂ ಹೆಚ್ಚು ನೇರ ಫಲಾನುಭವಿಗಳಿಗೆ ಪ್ರಯೋಜನ ತಲುಪಿಸುವಲ್ಲಿ ಸಫಲವಾಗಿದೆ ಎಂದು ಬೆಳ್ತಂಗಡಿ ಶಾಖೆಯ ಪ್ರಬಂಧಕ ಜೋಯಲ್ ಎಮ್.ಜೆ. ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶೇಷ ಕಾರ್ಯ ಸಾಧನೆ ಮಾಡಿದ ಎಸ್.ಬಿ ಐ ಬೆಳ್ತಂಗಡಿ ಶಾಖೆಯ ರಾಜಶೇಖರ್ ಶೆಟ್ಟಿ ಮತ್ತು ಲಕ್ಷ್ಮಿ ನಾರಾಯಣ್ ರವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸೇಲ್ಸ್ ಮ್ಯಾನೇಜರ್ ಸುಂದರ್ ಚಂದರ್ ರೆಡ್ಡಿ, ಡೆಪ್ಯೂಟಿ ರೀಜನಲ್ ಮ್ಯಾನೇಜರ್ ಪ್ರಕಾಶ್ ದುರ್ಗದ ಮಠ, ನಮ್ರತಾ ಕುಲಾಲ್, ಆಂಟನಿ ಫೆರ್ನಾಂಡಿಸ್, ಗುರುಕಿರಣ್, ರಾಜಶೇಖರ್ ಶೆಟ್ಟಿ, ತಾ. ಪಂ. ನ ಎಕ್ಸಿಕ್ಯೂಟಿವ್ ಆಫೀಸರ್ ಭವಾನಿ ಶಂಕರ್, ಎಮ್. ಸಿ. ಸಿ ಬ್ಯಾಂಕ್ ಮ್ಯಾನೇಜರ್ ಶರೋನ್ ಪಿಂಟೋ ಹಾಗೂ ವಿವಿಧ ಶಾಖೆಗಳ ಉದ್ಯೋಗಿಳು ಉಪಸ್ಥಿತರಿದ್ದರು. ಲಕ್ಷ್ಮಿ ನಾರಾಯಣ್ ಸ್ವಾಗತಿಸಿ, ವಂದಿಸಿದರು.

Exit mobile version