Site icon Suddi Belthangady

ಅರುವ ಭಜನಾ ಕಮ್ಮಟೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಅಳದಂಗಡಿ: ಶ್ರೀ ಸೋಮನಾಥೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಅಳದಂಗಡಿ ಇದರ ನೇತೃತ್ವದಲ್ಲಿ-ವಿವಿಧ ಭಜನಾ ಮಂಡಳಿ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎ. 11ರಂದು ಅಳದಂಗಡಿಯಲ್ಲಿ ಜರುಗಲಿರುವ ಭಜನಾ ಕಮ್ಮಟೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರವರು ಮಾ.21ರಂದು ಪೂರ್ವಾಹ್ನ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಮಂಡಳಿಯ ಅಧ್ಯಕ್ಷ ರಘು ದೇವಾಡಿಗ ನಡಾಯಿ, ಕಾರ್ಯದರ್ಶಿ ಕೊರಗಪ್ಪ ಪೂಜಾರಿ ನೀರಲ್ಕೆ, ಉಪಾಧ್ಯಕ್ಷ ಇಂಧುದರ್, ಜೊತೆ ಕಾರ್ಯದರ್ಶಿ ಯಶೋಧರ ಸುವರ್ಣ ಬಿಕ್ಕಿರ, ಕಮ್ಮಟೋತ್ಸವದ ಜೊತೆ ಕಾರ್ಯದರ್ಶಿ ಆನಂದ್ ಪೂಜಾರಿ, ಮಕ್ಕಳ ಸಮಿತಿಯ ಅಧ್ಯಕ್ಷೆ ಶರಣ್ಯ ಉಪಸ್ಥಿತರಿದ್ದರು.

Exit mobile version