Site icon Suddi Belthangady

ವಿದ್ವತ್ ಪಿ.ಯು. ಕಾಲೇಜಿನಲ್ಲಿ ಸುನೀತ ವಿಲಿಯಮ್ಸ್ ರವರಿಗೆ ಗೌರವ ಸಮರ್ಪಣೆ

ಬೆಳ್ತಂಗಡಿ: ಭಾರತೀಯ ಸಂಜಾತೆ ಸುನೀತ ವಿಲಿಯಮ್ಸ್ ಹಾಗೂ ಅಮೆರಿಕದ ಬುಚ್ ವಿಲ್ಮೋರ್ ರವರು ಬಾಹ್ಯಾಕಾಶದಿಂದ ಮಾ. 19ರಂದು ಬೆಳಿಗ್ಗೆ 3.27ಕ್ಕೆ ಭೂಮಿಗೆ ಬಂದಿಳಿದ ಐತಿಹಾಸಿಕ ಸಾಹಸದ ಕ್ಷಣದ ದೃಶ್ಯಗಳನ್ನು ಎಲ್ಲಾ ಮಕ್ಕಳಿಗೂ ತೋರಿಸಿ, ಸಾಧನೆ ತೋರಿದ ಈ ಸಾಧಕರಿಗೆ ಸಮಸ್ತ ವಿದ್ವತ್ ವಿದ್ಯಾರ್ಥಿ ಹಾಗೂ ಬೋಧಕ ಸಿಬ್ಬಂದಿ ಗೌರವ ಸೆಲ್ಯೂಟ್ ಸಮರ್ಪಣೆ ಮಾಡಿ, ಮಾ. 20ರಂದು ನಡೆದ ಕಾರ್ಯಕ್ರಮದಲ್ಲಿ ಅವರ ಸಾಧನೆಯನ್ನು ಕೊಂಡಾಡಿತು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಕ್ಕಳು ಅಭ್ಯಾಸ ಮಾಡುವ ಭೌತಶಾಸ್ತ್ರದ ಥಿಯರಿ ಹೇಗೆ ಉಪಯೋಗಿಸಲ್ಪಡುತ್ತದೆ. ಭೌತಶಾಸ್ತ್ರ ವಿಷಯ ತಜ್ಞ ಅತುಕುರಿ ನರೇಶ್ ರವರು ವಿವರಿಸಿದರೆ, ರಸಾಯನ ಶಾಸ್ತ್ರದಲ್ಲಿ ಮಕ್ಕಳು ಕಲಿಯುವ ಥಿಯರಿಗಳು ಹೇಗೆ ಉಪಯೋಗಿಸಲ್ಪಡುತ್ತವೆ ಎಂಬುದನ್ನು, ರಸಾಯನಶಾಸ್ತ್ರ ವಿಷಯತಜ್ಞ, ಶ್ರೀ ಪ್ರಥಾಪ್ ದೊಡ್ಡಮನೆಯವರು ವಿವರಿಸಿದರು. ವೈಜ್ಞಾನಿಕ ಕುತೂಹಲ ಮೂಡಿಸುವ ಪ್ರಮುಖ ಉದ್ದೇಶ ಹೊಂದಿರುವ ಇನ್ಸ್ಪೈರ್ ವಿದ್ವತ್ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿತ್ತು.

ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆಯವರು ಸುನೀತಾ ವಿಲಿಯಮ್ಸ್ ರವರ ಸಾಹಸಗಾಥೆಯ ವಿವರ ನೀಡಿ, ಪ್ರತಿಭಾವಂತರಿಗಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಉಪಸ್ಥಿತರಿದ್ದರು. ಅನುಶ್ರೀ, ಜೀವಶಾಸ್ತ್ರ ಉಪನ್ಯಾಸಕಿ, ಕಾರ್ಯಕ್ರಮ ನಿರೂಪಿಸಿದರು. ನಂತರ ಗ್ರೂಪ್ ಕ್ಯಾಪ್ಟನ್ ಕು. ರಾಹುಲ್ ಸ್ವಾಮಿ ಗೌರವ ವಂದನೆಯ ಕಾರ್ಯಕ್ರಮ ನೆರವೇರಿಸಿದರು.

Exit mobile version