Site icon Suddi Belthangady

ಇಂದಬೆಟ್ಟುವಿನಲ್ಲಿ ಒಂದು ದಿನದ ರೈತ ತರಬೇತಿ

ಇಂದಬೆಟ್ಟು: ಮಾ. 19ರಂದು ಸಮೃದ್ಧಿ ಮಹಿಳಾ ಸಂಜೀವಿನಿ ಗ್ರಾಮ ಪಂಚಾಯತ್ ಇಂದಬೆಟ್ಟು, ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದಲ್ಲಿ ಒಂದು ದಿನದ ರೈತ ತರಬೇತಿಯನ್ನು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು, ಸಂಜೀವಿನಿ ಸದಸ್ಯರು, ಎಂ. ಬಿ.ಕೆ., ಎಲ್.ಸಿ. ಆರ್.ಪಿ. ಕೃಷಿ ಅಧಿಕಾರಿ ಗಣೇಶ್ ರವರು, ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸುಲೈಮಾನ್ ಬೆಳಾಲು ಅಣಬೆ ಕೃಷಿ ತರಬೇತಿಯನ್ನು, ನಾಗೇಶ್ ರವರು ನೀರಾವರಿ ಪದ್ಧತಿಯ ಬಗ್ಗೆ ಹಾಗೂ ಅದರ ವಿಧಾನಗಳ ಬಗ್ಗೆ ತಿಳಿಸಿದರು. ಪ್ರಭಾಕರ ಮಯ್ಯ ಸಮಗ್ರ ಕೃಷಿ ಬಗ್ಗೆ, ಅಡಿಕೆ ಮಲ್ಲಿಗೆ ಕೃಷಿ ಬಗ್ಗೆ ಅದಕ್ಕೆ ಬರುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಇಂದಬೆಟ್ಟು ಗ್ರಾಮದ ಕೃಷಿ ಸಖಿ ಹಾಗೂ ಉಜಿರೆ ಗ್ರಾಮದ ಕೃಷಿ ಸಖಿ ಆಯೋಜನೆ ಮಾಡಿದ್ದರು. ಈ ತರಬೇತಿಯಲ್ಲಿ ಗ್ರಾಮದ ಸುಮಾರು 70 ಜನ ರೈತರು ಪ್ರಯೋಜನ ಪಡೆದುಕೊಂಡರು.

Exit mobile version