ನೆರಿಯ: ಗ್ರಾಮದ ಪುಲ್ಲಾಜೆ ಹೊನ್ನಪ್ಪ ಗೌಡ ಪುತ್ರ ಉಮೇಶ್ ಗೌಡ (48 ) ಮರದಿಂದ ಬಿದ್ದು ಮೃತಪಟ್ಟ ಘಟನೆ ಮಾ. 18ರಂದು ನಡೆದಿದೆ.
ಪೆರಿಯಡ್ಕ ಮಲ್ನಾ ಎಂಬಲ್ಲಿ ವಾಸವಾಗಿರುವ ಉಮೇಶ್ ಮನೆ ಹತ್ತಿರದ ಮಾವಿನ ಮರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದಾರೆ. ಮೂಲಗಳ ಪ್ರಕಾರ ಮರದಲ್ಲಿಯೇ ಹೃದಯಘಾತವಾಗಿದೆ ಎಂದು ತಿಳಿದು ಬಂದಿದೆ. ಇವರು ಉಜಿರೆಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತಿದ್ದರು.
ಮೃತರು ಪತ್ನಿ ಗೀತಾ, ಮಕ್ಕಳಾದ ಸ್ಪಂದನ, ಸ್ಪರ್ಶ, ಸಹೋದರ ಉದ್ಯಮಿ ಪಿ. ಹೆಚ್. ಆನಂದ್, ಹರೀಶ ಗೌಡ, ನಾರಾಯಣ ಗೌಡ, ಲೋಕೇಶ್ ಗೌಡ, ಸಹೋದರಿ ಭಾರತಿ, ಚಿತ್ರರವರನ್ನು ಅಗಲಿದ್ದಾರೆ.