Site icon Suddi Belthangady

ಕಡಿರುದ್ಯಾವರ: ವಿದ್ಯುತ್ ಪರಿವರ್ತಕದಿಂದ ಬೆಂಕಿ ಅವಘಡ

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹೆಡ್ಯ ಎಂಬಲ್ಲಿ ವಿದ್ಯುತ್‌ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಬೆಂಕಿ ಹತ್ತಿಕೊಂಡ ಘಟನೆ ಮಾ.18ರಂದು ನಡೆದಿದೆ. ಸ್ಥಳೀಯರು ತಕ್ಷಣ ಕಾರ್ಯ ಪ್ರವೃತ್ತರಾಗಿ ಬೆಂಕಿಯನ್ನು ಹತೋಟಿಗೆ ತಂದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಹತ್ತಿರದಲ್ಲೇ ರಬ್ಬರ್ ತೋಟವಿದ್ದು ಇಲ್ಲಿಗೆ ಬೆಂಕಿ ಪಸರಿಸುತಿದ್ದರೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Exit mobile version