Site icon Suddi Belthangady

ರೆಖ್ಯ: ಕೊಲಾರು ದೇವಸ್ಥಾನದ ಬಳಿ ಕಳೆದ ಮಳೆಗಾಲದಲ್ಲಿ ಜರಿದು ಬಿದ್ದಿದ್ದ ಮಣ್ಣು ತೆರವು ಕಾರ್ಯ ಆರಂಭ: ಭೇಟಿ ಸಂದರ್ಭ ಮಣ್ಣು ತೆರವು ಮಾಡಿಕೊಡುವುದಾಗಿ ತಿಳಿಸಿದ್ದ ಶಾಸಕರು

ರೆಖ್ಯ: ಗ್ರಾಮದ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಇದ್ದ ಬೃಹತ್ ಗಾತ್ರದ ಗುಡ್ಡ ಕಳೆದ ಮಳೆಗಾಲದಲ್ಲಿ ಜರಿದು ಬಿದ್ದು ದೇವಸ್ಥಾನದ ಸುತ್ತು ಗೊಪುರ ಹಾನಿ ಮತ್ತು ದೇವಸ್ಥಾನ ಗರ್ಭ ಗುಡಿಯವಾರೆಗೆ ಮಣ್ಣು ಬಂದಿದ್ದು ಭಕ್ತರಲ್ಲಿ ಮತ್ತು ಗ್ರಾಮಸ್ಥರಲ್ಲಿ ಬಾರಿ ಆತಂಕ ಮೂಡಿತ್ತು.

ಶಾಸಕ ಹರೀಶ್ ಪೂಂಜಾ ರವರು ದೇವಾಲಯಕ್ಕೆ ಭೇಟಿ ನೀಡಿ ಮಣ್ಣು ತೆರವು ಮಾಡಿ ಕೊಡುವುದಾಗಿ ತಿಳಿಸಿದ್ದರು. ಶಾಸಕರ ಸೂಚನೆಯಂತೆ ಗುತ್ತಿಗೆದಾರರಾದ ದಿಶಾoತ ಕುಮಾರ್ ಮಣ್ಣು ತೆರವು ಕೆಲಸ ಪ್ರಾರಂಭಿಸಿದ್ದು, ಅರಿಸಿನಮಕ್ಕಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ನವೀನ್ ರೆಖ್ಯ, ದೇವಸ್ಥಾನ ಸಮಿತಿಯ ಲಕ್ಷ್ಮಣ ಗೌಡ ಕನ್ನಯಂಡ, ರವಿಂದ್ರ ಗೌಡ ಕೊಲಾರು ಮುಂತಾದವರು ಉಪಸ್ಥಿತರಿದ್ದರು.

Exit mobile version