ಬೆಳ್ತಂಗಡಿ: ಮಂಗಳೂರು ಏನಪೋಯ ಅಂತಿಮ ವರ್ಷದ ಎಂ.ಬಿ.ಎ ಮತ್ತು ಸಿ.ಎಂ.ಎ ವಿದ್ಯಾರ್ಥಿ ಮುಹಮ್ಮದ್ ನಿಶ್ವಾನ್ ಅವರು 2022- 23ನೇ ಸಾಲಿನ ಎನ್. ಎಸ್. ಎಸ್ ಅತ್ಯುತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಮಾ. 17ರಂದು ರಾಜ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಮುಹಮ್ಮದ್ ನಿಶ್ವಾನ್ ಉಜಿರೆ ಗಾಂಧಿ ನಗರದ ನಿವಾಸಿ ಉಸ್ಮಾನ್ ಹಾಗೂ ನಫೀಸಾ ಶೀಬಾ ದಂಪತಿಯ ಪುತ್ರ., ಕಾಲೇಜಿನ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಆಗಿಯೂ ಇವರು ಗೌರವಕ್ಕೆ ಪಾತ್ರರಾಗಿದ್ದಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾ ಸಭಾಪತಿ ಯು.ಟಿ. ಖಾದರ್,ವಕ್ಫ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ವಿ.ಪ.ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ಇವರನ್ನು ಅಭಿನಂದದಿಸಿದರು. ಮಹಮ್ಮದ್ ನಿಶ್ವಾನ್ ತಾಯಿ ನಫೀಸಾ ಶೀಬಾ ಉಪಸ್ಥಿತರಿದ್ದರು.