Site icon Suddi Belthangady

ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಕಡಿರುದ್ಯಾವರದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕಡಿರುದ್ಯಾವರ: ಮಾ. 15ರಂದು ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಲೋಕೇಶ್ವರಿ ವಿನಯ ಚಂದ್ರ ವಹಿಸಿದ್ದರು.

ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ, ಮಾಜಿ ಮಹಿಳಾ ಮಂಡಲ ಒಕ್ಕೂಟ ಅಧ್ಯಕ್ಷೆ ಭಾರತಿ ಹೆಬ್ಬಾರ್ ಹಾಗು ವೇದಿಕೆಯಲ್ಲಿ ಹಿರಿಯರಾದ ವರದಾಬಾಯಿ ಉಪಸ್ಥಿತರಿದ್ದರು. ಸಭೆಯನ್ನು ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುರೇಖಾ ಉದ್ಘಾಟಿಸಿದರು.

ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 4 ಜನ ಮಹಿಳೆಯರಾದ ಭಾರತಿ ಹೆಬ್ಬಾರ್, ರುಕ್ಮಿಣಿ ಲೋಕಯ್ಯ ಗೌಡ, ಗಾಯತ್ರಿ ಕೂಸಪ್ಪ ಮಲೆಕುಡಿಯ, ಲಿಸಿ ಜಾರ್ಜ್ ರವರನ್ನು ಸ್ಮರಣಿಕೆಯೊಂದಿಗೆ ಸೀರೆ ಹೊದಿಸಿ ಸನ್ಮಾನಿಸಲಾಯಿತು. ಸೀಬಾ ಜಾರ್ಜ್, ಸೌಮ್ಯ ನಾಯ್ಕ, ಡೀಕಮ್ಮ, ರೋಸಮ್ಮ, ವಸಂತಿ, ಭವಶ್ರೀ ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮವನ್ನು ರಮಾ ಪರಂಜಪೆ ಸ್ವಾಗತಿಸಿ, ಭಾರತಿ ಉದ್ಧಾರ ನಿರೂಪಿಸಿದರು. ನಳಿನಿ ವಂದಿಸಿದರು.

Exit mobile version