Site icon Suddi Belthangady

ದೀಪದ ಬತ್ತಿ ತಯಾರಿ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ಮಾ. 16ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬೆಳ್ತಂಗಡಿ ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ದೀಪದ ಬತ್ತಿ ತಯಾರಿಕಾ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ತಾ.ಪಂ. ಇ. ಓ. ಭವಾನಿ ಶಂಕರ್ ಇವರು ಭಾಗವಹಿಸಿ ಅವಕಾಶಗಳು ಬಂದಾಗ ಅದನ್ನು ನಾವು ಬಳಸಿಕೊಳ್ಳುವುದು ನಮ್ಮ ಜಾಣತನ, ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಹಲವಾರು ದಾರಿಗಳಿವೆ. ಆ ದಾರಿಗೆ ಸರಿಯಾದ ಯೋಜನೆ ಹಾಕಿಕೊಂಡಲ್ಲಿ ಮಹಿಳೆಯರು ದುಡಿಮೆ ಮಾಡಲು ಸಾಧ್ಯ ಎಂದರು. ಆ ನಂತರ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.

ಒಟ್ಟು 37 ಮಂದಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸೋಮನಾಥ್ ಕೆ. ತಾಲೂಕು ಪಂಚಾಯತ್ ತರಬೇತುದಾರರು ಸುಧಾಮಣಿ ಉಪಸ್ಥಿತರಿದ್ದರು. ತರಬೇತಿ ನೀಡಲು ಪುತ್ತೂರು ದೀಪದ ಬತ್ತಿ ತಯಾರಿಕಾ ಸಂಸ್ಥೆಯ ಮಾಲಕ ಪುನೀತ್ ಹಾಗೂ ಶಿಶಿರ್ ಇವರು ಮೆಷಿನ್ ಮೂಲಕ ಬತ್ತಿ ತಯಾರಿಕೆ ಮತ್ತು ಪ್ಯಾಕಿಂಗ್ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ತರಬೇತಿ ಸಂಯೋಜಕರಾದ ಜಯಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು.

Exit mobile version