Site icon Suddi Belthangady

ಎಸ್.ಎಸ್.ಎಫ್ ಬೆಳ್ತಂಗಡಿ ವತಿಯಿಂದ Q – PLAN ತರಬೇತಿ ಶಿಬಿರ ಹಾಗೂ ID ಕಾರ್ಡ್ ವಿತರಣೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಬೆಳ್ತಂಗಡಿ ಡಿವಿಷನ್ ವತಿಯಿಂದ Q -PLAN ತರಬೇತಿ ಶಿಬಿರ ಹಾಗೂ ID ಕಾರ್ಡ್ ವಿತರಣೆಯು ಉಜಿರೆ ಮಲ್ಜಹ್ ಕ್ಯಾಂಪಸ್ ನಲ್ಲಿ ನಡೆಯಿತು. ಡಿವಿಷನ್ ವ್ಯಾಪ್ತಿಯ 7 ಸೆಕ್ಟರ್ ಗಳ ಹಾಗೂ 58 ಯುನಿಟ್ ಗಳ ಸದಸ್ಯರು ಭಾಗವಹಿಸಿದ್ದರು.

ಎಸ್. ಎಸ್. ಎಫ್ ಬೆಳ್ತಂಗಡಿ ಡಿವಿಷನ್ ನಿಕಟಪೂರ್ವ ಅಧ್ಯಕ್ಷ ಶಾಫಿ ಮದನಿ ಪಾಂಡವರಕಲ್ಲು ತರಗತಿ ನಡೆಸಿಕೊಟ್ಟರು. ಅಧ್ಯಕ್ಷ ಇಸಾಕ್ ಅಳದಂಗಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಾಫಿಲ್ ಅಬ್ದುಲ್ ಬಾಸಿತ್ ಹಿಮಮಿ ಉದ್ಘಾಟಿಸಿದರು. ನೌಫಾಲ್ ಮರ್ಝೂಕಿ ಸಖಾಫಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ನಾಸಿರ್ ಪಡ್ಡಂದಡ್ಕ ಸ್ವಾಗತಿಸಿದರು. ಅಬ್ದುಲ್ ಲತೀಫ್ ಅಹ್ಸನಿ ವಂದಿಸಿದರು.

Exit mobile version