Site icon Suddi Belthangady

ಬಜಿರೆ – ಹೊಸಪಟ್ಣ ನವೀಕೃತ ಭಜನಾ ಮಂದಿರದ ಲೋಕಾರ್ಪಣೆ

ಹೊಸಪಟ್ಣ: ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ-ಬಜಿರೆ ಮತ್ತು ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಗತಿ ಬಂಧು ಒಕ್ಕೂಟ ಬಜಿರೆ ‘ಬಿ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.14ರಂದು ನವೀಕೃತ ಭಜನಾ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದೊಂದಿಗೆ 46ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಸಂಜೆ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಸೇವಾಕತೃ ರಾಜೀವಿ ಮತ್ತು ಮಕ್ಕಳು, ಪಾರಿಜಾತ ಅಂಡಿಂಜೆ. ದಿ. ಕೆ. ಕೋಟ್ಯಪ್ಪ ಪೂಜಾರಿ ಲೋಕಮ್ಮ ದಂಪತಿಗಳ ಸ್ಮರಣಾರ್ಥ ಕೆ. ಹರೀಶ್ಚಂದ್ರ ಹೆಚ್. ಎ. ಎಲ್ ಬೆಂಗಳೂರು ಇವರು 20ನೇ ವರ್ಷದ ವಿದ್ಯಾರ್ಥಿ ವೇತನವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಪಟ್ಣ ಇಲ್ಲಿನ ಐದನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿದರು.

ನವೀಕೃತ ಭಜನಾ ಮಂದಿರವನ್ನು ಕೆ. ಮೋಹನ್ ಕುಮಾರ್, ಸಮಾಜಸೇವಕರು, ‘ಬದುಕು ಕಟ್ಟೋಣ ಬನ್ನಿ ತಂಡದ ಮುಂದಾಳು ಹಾಗೂ ಮಾಲಕರು ಲಕ್ಷ್ಮೀ ಇಂಡಸ್ಟ್ರೀಸ್ (ಕನಸಿನ‌ ಮನೆ) ಉಜಿರೆ‌ ಇವರು ಉದ್ಘಾಟಿಸಿದರು. ವೇದಿಕೆಯಲ್ಲಿ ಕೆ. ಜಯರಾಮ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವೇಣೂರು, ಶ್ರೀಮತಿ ಮಲ್ಲಿಕಾ ಕಾಶೀನಾಥ್, ವೇಣೂರು ಗ್ರಾಮಪಂಚಾಯತ್ ಅಧ್ಯಕ್ಷರು. ಸುರೇಶ್ ಕುಮಾರ್ ಆರಿಗ, ಪೆರ್ಮಾಣುಗುತ್ತು, ಬಜಿರೆ, ರಮೇಶ್ ಕುಡ್ಮೇರು, ಸ್ಥಾಪಕಾಧ್ಯಕ್ಷ, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಮುಂತಾದವರು ಉಪಸ್ಥಿತರಿದ್ದರು.

ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಜಾರಿಗೆದಡಿ, ಹೊಸಪಟ್ಣ ಸಮಿತಿಯ ಪ್ರಧಾನ‌ ಸಂಚಾಲಕ ಗಣೇಶ ಪೂಜಾರಿ, ಕೆ. ಮೋಹನ್ ಕುಮಾರ್ ಇವರ ಸನ್ಮಾನ ಪತ್ರ ಪ್ರಸ್ತುತಪಡಿಸಿದರು.

ಸಮಿತಿಯ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್ ಮೇರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಬಿ. ಪದ್ಮನಾಭ ರೈ ಬ್ರಾಣಿಗೇರಿ, ಉಪಾಧ್ಯಕ್ಷ ಬಿ. ದಾಸಪ್ಪ ರೈ ಬ್ರಾಣಿಗೇರಿ, ಸಮಿತಿ ಜೊತೆ ಕಾರ್ಯದರ್ಶಿ ಆನಂದ ಪೂಜಾರಿ, ಕೋಶಾಧಿಕಾರಿ ಮೋಹಾನಂದ ಕುಡ್ಮೆರು, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ನಾಯರ್ ಮೇರು, ಕಾರ್ಯದರ್ಶಿ ಮೋಹನ್ ಕುಮಾರ್ ಬಿ.ಸಿ. ಹೊಸಪಟ್ಣ,. ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ನಾಯರ್ಮೆರ್, ಗೌರವಾಧ್ಯಕ್ಷ ದೇಜಪ್ಪ ಮೂಲ್ಯ ಶಾಂತಿರೊಟ್ಟು ಮುಂತಾದ ಪ್ರಮುಖರೊಂದಿಗೆ ವಿವಿಧ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version