ನಾರಾವಿ: ಗ್ರಾಮ ಪಂಚಾಯತ್ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯು ಮಾ. 11ರಂದು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಗ್ರಾ. ಪಂ. ಅಧ್ಯಕ್ಷ ರಾಜವರ್ಮ ಜೈನ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ್ರಾ ಹಾಗೂ ಸದಸ್ಯರಾದ ಉದಯ ಹೆಗ್ಡೆ, ನಾರಾಯಣ ಮತ್ತು ಸಂತೋಷ್ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ. ಡಿ. ಪ್ರಾಸ್ತಾವಿಕ ಮಾತಾನಾಡಿದರು.
ತೇಜಸ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗ್ರಾ. ಪಂ. ನಾರಾವಿ ಇವರು ಸಭೆಯಲ್ಲಿ ವಾರ್ಷಿಕ ವರದಿಯನ್ನು ಸಂಕ್ಷಿಪ್ತವಾಗಿ ಸಭೆಗೆ ಮಂಡಿಸಿದರು. ಸರಕಾರದಿಂದ ವಿಶೇಷಚೇತನರಿಗೆ ಸಿಗುವ ಎಲ್ಲಾ ಯೋಜನೆ ಹಾಗೂ ಅದನ್ನು ಪಡೆಯುವ ಬಗ್ಗೆ ಮಾಹಿತಿಯನ್ನು ಜೋನ್ ಬ್ಯಾಪಿಸ್ಟ್ ಡಿ ಸೋಜಾ ತಾಲೂಕು ವಿಶೇಷಚೇತನರ ಮೇಲ್ವಿಚಾರಕರು ಇವರು ನೀಡಿದರು.
ಆರೋಗ್ಯ ಇಲಾಖೆಯಿಂದ ಗೋಪಿ ಹೆಚ್., ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ವಿಶೇಷ ಚೇತನರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನಾರಾವಿ ಮತ್ತು ಕುತ್ಲೂರು ಗ್ರಾಮಡಳಿತಾಧಿಕಾರಿ ಅಕ್ಷತ್ ವಿಶೇಷಚೇತನರ ಮಾಸಿಕ ಪಿಂಚಣಿ ಹಾಗೂ ಪಿಂಚಣಿಗೆ NPCI ಲಿಂಕ್ ನ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಇವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾವ್ಯ, ಸಮುದಾಯ ಆರೋಗ್ಯ ಅಧಿಕಾರಿ ಇವರ ನೇತೃತ್ವದಲ್ಲಿ ವಿಶೇಷಚೇತನರ ಆರೋಗ್ಯ ದೃಷ್ಠಿಯಿಂದ ಒಟ್ಟು 45 ಜನ ವಿಶೇಷ ಚೇತನರ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ನಾರಾವಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಯೋಗಿನಿ ಶೆಟ್ಟಿ, ಪಂಚಾಯತ್ ಸಿಬ್ಬಂದಿ ವರ್ಗ, ಗ್ರಂಥಾಲಯ ಮೇಲ್ವಿಚಾರಕಿ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದು ಸಭೆಗೆ ಸಹಕರಿಸಿದರು.
ನಾರಾವಿ ಪಂಚಾಯತ್ ವ್ಯಾಪಿಯ 8 ಜನ ವಿಶೇಷಚೇತನರಿಗೆ ಪಂಚಾಯತ್ ಶೇ. 5ರ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕೆ ಸಹಾಯಧನವನ್ನು ವಿತರಿಸಲಾಯಿತು. ಸಭೆಯಲ್ಲಿ ಒಟ್ಟು 68 ಜನ ವಿಶೇಷಚೇತನರು ಹಾಜರಿದ್ದುಕೊಂಡು 2024-25ನೇ ಸಾಲಿನ ಸಭೆಯನ್ನು ಯಶಸ್ವಿಗೊಳಿಸಿದರು. ಸತೀಶ್ ಎಂ., ಬಿಲ್ ಕಲೆಕ್ಟರ್ ಸ್ವಾಗತಿಸಿ ಸಭೆಯ ಕೊನೆಯಲ್ಲಿ ಧನ್ಯವಾದವನ್ನು ನೀಡಿದರು. ಕೊನೆಯದಾಗಿ ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾತು.