ಬೆಳಾಲು: ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 10 ರಿಂದ 14ರವರೆಗೆ ಪದ್ಮನಾಭಾ ತಂತ್ರಿ ಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದು ಸಂಪನ್ನಗೊಂಡಿತು.
ಮಾ. 13ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮದ್ಯಾಹ್ನ ಮಹಾಪೂಜೆ, ಸಂಜೆ ಮಾಯ ಗುತ್ತು ಮನೆಯಿಂದ ದೈವಗಳ ಭಂಡಾರ ಆಗಮನ, ಭಕ್ತಿ ಗಾನ ಸುಧೆ, ರಾತ್ರಿ ರಥೋತ್ಸವ, ಭೂತಬಲಿ,
ಶಯನೋತ್ಸವ, ಮಾ. 14ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಮಹಾ ಪೂಜೆ, ಸಂಜೆ ಅವಭ್ರತ, ಧ್ವಜಾವರೋಹಣ ನಿತ್ಯ ಪೂಜೆ, ರಂಗ ಪೂಜೆ, ನಂತರ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು. ಬಳಿಕ ಗುತ್ತಿನ ಮನೆಗೆ ಭಂಡಾರ ನಿರ್ಗಮನ ನಡೆಯಿತು.
ಮಾ. 15ರಂದು ಬೆಳಿಗ್ಗೆ ದೇವಸ್ಥಾನದ ನಾಗಬನದಲ್ಲಿ ನಾಗತಂಬಿಲ ಸೇವೆ, ಸಂಪ್ರೊಕ್ಷಣೆ, ಮಂಗಳ ಮಂತ್ರಾಕ್ಷತೆ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡ, ಆನುವಂಶಿಕ ಮೋಕ್ತೆಸರ ಪುಷ್ಪದಂತ ಜೈನ್ ಮಾಯಗುತ್ತು, ಅಸ್ರಣ್ಣ ಗಣೇಶ್ ಬಾರಿತ್ತಯ, ಪವಿತ್ಪಾಣಿ ಮೋಹನ್ ಕೆರ್ಮುಣ್ಣಾಯ, ಅರ್ಚಕ ಕೇಶವ ರಾಮಾಯಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಗಳಾದ ಸುರೇಶ್ ಭಟ್ ಪರಂಗಜೆ, ರಾಜಪ್ಪ ಗೌಡ ಪುಚ್ಚಹಿತ್ಲು, ದಾಮೋದರ ಗೌಡ ಸುರುಳಿ, ದಯಾನಂದ ಪಿ. ಬೆಳಾಲು, ದಿನೇಶ್ ಎಂ. ಕೆ., ವಾರಿಜ ಗುಂಡ್ಯ, ಕವಿತಾ ಉಮೇಶ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಮಾಯ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ ಮತ್ತು ಸದಸ್ಯರು, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಕೃಷ್ಣ ಮತ್ತು ಸದಸ್ಯರು, ವರಮಹಾ ಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಲಲಿತ ಮೋನಪ್ಪ ಗೌಡ ಮತ್ತು ಸದಸ್ಯರು, ವಿಲಯ ದವರು, ಸಿಬ್ಬಂದಿ ವರ್ಗ, ಊರವರು ಉಪಸ್ಥಿತರಿದ್ದು ಸಹಕರಿಸಿದರು.