Site icon Suddi Belthangady

ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ

ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಸುಮಾರು 22 ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆಯು ಮಾ. 14ರಂದು ಹುಣ್ಣಿಮೆಯಂದು ಸಾಯಂಕಾಲ ಅತ್ಯಂತ ವಿಜ್ರಂಬಣೆಯಿಂದ ಜರಗಿತು.

ನೂರಾರು ಭಕ್ತರು ಕ್ಷೇತ್ರದಲ್ಲಿ ಹಾಜರಿದ್ದು ಸೇವಾ ಪ್ರಸಾದ ಸ್ವೀಕರಿಸಿದರು. ಶ್ರೀ ರಾಘವೇಂದ್ರ ಬಾಂಗ್ಯಣ್ಣಾಯರವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ಸಾಂಗೋಪವಾಗಿ ಜರಗಿತು. ಕ್ಷೇತ್ರದ ವತಿಯಿಂದ ಅಧ್ಯಕ್ಷ ಪೀತಾಂಬರ ಹೆರಾಜೆ, ಪ್ರೊ. ಎ. ಕೃಷ್ಣಪ್ಪ ಪೂಜಾರಿ, ಮಹಾಬಲ ಶೆಟ್ಟಿ, ವಸಂತ ಸುವರ್ಣ, ಜಯರಾಮ ಬಂಗೇರ, ಸುಶೀಲಾ ಎಸ್. ಹೆಗ್ಡೆ, ಶ್ರವಣ್ ರಾಜ್, ಕೃಷ್ಣ ಶೆಟ್ಟಿ, ಇನ್ನಿತರ ಭಕ್ತರು ಹಾಜರಿದ್ದರು.

Exit mobile version