Site icon Suddi Belthangady

ಹನುಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಅಳದಂಗಡಿ: ಸಂಸ್ಕಾರ ಭಾರತಿ ಬೆಳ್ತಂಗಡಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ವತಿಯಿಂದ ಮಾ. 14ರಂದು ಪಿಲ್ಯ ಮಹಮ್ಮಾಯೀ ಭಜನಾ ಮಂದಿರದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಪೂರ್ವಭಾವಿ ಸಭೆ ನಡೆಯಿತು.

ನಾವರ ಪಿಲ್ಯ ಸುಲ್ಕೇರಿ ಕುದ್ಯಾಡಿ ಗ್ರಾಮದ ಉಸ್ತುವಾರಿಗಳ ಸಭೆಯನ್ನು ಕರೆಯಲಾಗಿತ್ತು. ಅಳದಂಗಡಿ ಶ್ರೀ ಕ್ಲಿನಿಕ್ ನ ವೈದ್ಯ ಡಾ.ಎನ್.ಎಮ್ ತುಳುಪುಳೆ ಎ. 12ರಂದು ಅಳದಂಗಡಿಯಲ್ಲಿ ನಡೆಯುವ ಹನುಮೋತ್ಸವ 2025ರ ಲಾಂಛನ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಭಜನಾ ಮಂದಿರದ ಅರ್ಚಕರಾದ ಶೇಷಗಿರಿ ಭಟ್ ಕಾರ್ಯಕ್ರಮದ ಯಶಸ್ವಿಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂಸ್ಕಾರ ಭಾರತಿ ತಾಲೂಕು ಅಧ್ಯಕ್ಷ ಸಂಪತ್ ಬಿ.ಸುವರ್ಣ ಹನುಮೋತ್ಸವದ ಬಗ್ಗೆ ಸವಿವರವಾದ ಮಾಹಿತಿ ನೀಡಿ ಸಂಪೂರ್ಣವಾಗಿ ಹನುಮೋತ್ಸವ ಯಶಸ್ವಿಯಾಗಲು ಪ್ರತೀ ಗ್ರಾಮದ ಹಿಂದೂ ಮನೆಗಳಿಗೂ ಆಮಂತ್ರಣ ಪತ್ರಿಕೆ ತಲುಪಿಸಬೇಕು ಮತ್ತು ಯಾಗದಲ್ಲಿ ವೃತಧಾರಿಗಳು ಭಾಗವಹಿಸುವಂತೆ ಮಾಡಬೇಕೆಂದು ಕೇಳಿಕೊಂಡರು.

ಸಮಾಲೋಚನಾ ಸಭೆಯಲ್ಲಿ ಸುಲ್ಕೇರಿ ಗ್ರಾ.ಪಂ‌.ಉಪಾಧ್ಯಕ್ಷರಾದ ಶುಭಕರ ಬಂಗೇರ ಸತೀಶ್ ಶಿರ್ಲಾಲು, ವಿಶ್ವನಾಥ ಬಂಗೇರ, ರಾಜೇಶ್ ಬುಣ್ಣಾನ್, ಉಮೇಶ್ ಸುವರ್ಣ, ಹರೀಶ್ ಕಲ್ಲಾಜೆ, ಪ್ರಶಾಂತ ಕರಂಬಾರು, ಆನಂದ ಪೂಜಾರಿ ಮಣಿಕಂಠ, ಶೈಲೇಶ್ ಪಾಡಿಪಿಲ್ಯ, ಸುಧೀರ್ ಪಾಡಿಪಿಲ್ಯ, ಪುನೀತ್ ಬಂಗೇರ, ಉಮೇಶ್ ಬಂಗೇರ, ಸತೀಶ್ ಬಂಗೇರ ದುಗ್ಗಲಚ್ಚಿಲ್, ಅವಿನಾಶ್ ಪಂಚರತ್ನ ನಾರಾಯಣ ಪೂಜಾರಿ ಪರಾರಿ, ರವಿ ಪೂಜಾರಿ ನಾವರ, ರಮಾನಾಥ ಪಾದೆಮಾರಡ್ಡ, ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ನಾವರ ಸ್ವಾಗತಿಸಿ ಸಂಚಾಲಕ ನಿತ್ಯಾನಂದ ಎನ್ ನಾವರ ಧನ್ಯವಾದ ಸಲ್ಲಿಸಿದರು.

Exit mobile version