Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ. ಟ್ರಸ್ಟ್ ವತಿಯಿಂದ ರೂ. 20,000 ಸಹಾಯಧನ ವಿತರಣೆ

ಬೆಳ್ತಂಗಡಿ: ಮೇಲಂತಬೆಟ್ಟು ಕಾರ್ಯಕ್ಷೇತ್ರ ದೀಪಾಶ್ರೀ ಸಂಘದ ಸದಸ್ಯೆ ಶಶಿಕಲಾ ಅನಾರೋಗ್ಯದಿಂದ ಇದ್ದು, ಇವರ ಚಿಕಿತ್ಸ ವೆಚ್ಚಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ ಶ್ರೀ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರು ಮಾಡಿರುವ ರೂ 20,000 ಮೊತ್ತದ ಮಂಜುರಾತಿ ಪತ್ರವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೆಂದ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮೇಲಂತಬೆಟ್ಟು ಒಕ್ಕೂಟದ ಅಧ್ಯಕ್ಷ ಯಶವಂತ, ನಾಗಬ್ರಹ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ, ಪಂಚಾಯತ್ ಸದಸ್ಯರಾದ ಚಂದ್ರರಾಜ್ ನೂಜೇಲು, ಕೃಷಿ ಅಧಿಕಾರಿ ರಾಮ್ ಕುಮಾರ್, ವಲಯದ ಮೆಲ್ಟಿಚಾರಕ ಹರೀಶ್ ಹಾಗು ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿ ಗುಣವತಿ ಉಪಸ್ಥಿತರಿದ್ದರು.

Exit mobile version