Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

ನಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ಉಚಿತ ವೀಲ್ ಚೆಯರ್ ನ್ನು ನಡ ಕಾರ್ಯಕ್ಷೇತ್ರದ ಚಂದನ ಸ್ವ-ಸಹಾಯ ಸಂಘದ ಸದಸ್ಯರಾದ ಅಬ್ದುಲ್ ಹಮೀದ್ ರವರ ತಾಯಿ ಝುಬೈದಾರವರಿಗೆ ವಿತರಿಸಲಾಯಿತು.

ಆರೋಗ್ಯ ಸಮಸ್ಯೆಯಿಂದಾಗಿ ನಡೆದಾಡಲು ಅಸಾಧ್ಯವಾಗಿರುದನ್ನು ಗಮನಿಸಿ ಯೋಜನೆಯ ವತಿಯಿಂದ ಮಂಜೂರಾಗಿರುವ ವೀಲ್ ಚಯರ್ ಅನ್ನು ತಾಲೂಕು ಯೋಜನಾಧಿಕಾರಿ ಸುರೇಂದ್ರರವರು ವಿತರಣೆ ಮಾಡಿದರು.

ನಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ, ರತ್ನಾಕರ್, ಊರಿನ ಗಣ್ಯರಾದ ಶ್ಯಾಮ್ ಸುಂದರ್ , ಪ್ರೇಮ ಆರ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ರಾಜೇಶ್ವರಿ, ಗೀತಾ, ಒಕ್ಕೂಟದ ಕಾರ್ಯದರ್ಶಿ ಉಮೈರಾಬಾನು, ಶಶಿಕಲಾ, ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್, ಸ್ಥಳೀಯರಾದ ಅಬ್ದುಲ್ ಗಫುರ್ ಸಾಹೇಬ್, ಸಾಬ್ ಜಾನ್ ಸಾಹೇಬ್ ಹಾಗೂ ಸೇವಾ ಪ್ರತಿನಿಧಿಗಳಾದ ಪುಷ್ಪ, ಶಕುಂತಲಾ ಉಪಸ್ಥಿತರಿದ್ದರು.

Exit mobile version