ಬೆಳಾಲು: ಮಾಯ ಶ್ರೀ ಮಹಾದೇವ ದೇವಳದ ಜಾತ್ರೆಯ ಪ್ರಯುಕ್ತ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ವತಿಯಿಂದ ಮಾ. 13ರಂದು ಅದರ ಸದಸ್ಯರು ಗಮಕ ವಾಚನ ವೈಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಿಂದ ಆರಿಸಿಕೊಂಡ ವಿಶ್ವೇಶ್ವರ ಸಾಕ್ಷಾತ್ಕಾರ ಕಾವ್ಯ ಭಾಗದ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು. ವಾಚನದಲ್ಲಿ ಗಮಕಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ, ತಾಲೂಕು ಪರಿಷತ್ತಿನ ಕಾರ್ಯದರ್ಶಿ ಗಮಕಿ ಮೇಧಾ ಭಟ್ ಉಜಿರೆ, ಗಮಕ ವಿದ್ಯಾರ್ಥಿಗಳಾದ ಕುಮಾರಿ ನಂದನಾ ಮಾಲೆಂಕಿ ಮತ್ತು ಭಾರವಿ ಭಟ್ ಪಾಲ್ಗೊಂಡು ತಮ್ಮ ಕಂಠಸಿರಿಯಲ್ಲಿ ಸುಮಧುರವಾಗಿ ವಾಚಿಸಿದರು.
ಬೆಳಾಲು ಎಸ್ ಡಿ ಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಶಿಕ್ಷಕರು, ಸಾಹಿತಿಗಳು ಹರೀಶ್ ಹತ್ತಿನ ಉಪಾಧ್ಯಕ್ಷರು ರಾಮಕೃಷ್ಣ ಭಟ್ ಚೊಕ್ಕಾಡಿ ನಿರೂಪಣಾ ವ್ಯಾಖ್ಯಾನವನ್ನು ನೀಡಿದರು. ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಸಂಯೋಜಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಕರಾವಳಿ ವಿಭಾಗದ ಮುಖ್ಯಸ್ಥ ರವೀಂದ್ರ ಶೆಟ್ಟಿ ಬಳಂಜ, ಗುರುನಾಥ ಪ್ರಭು ಉಜಿರೆ, ಕೋಲ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತಸರ ರಾಜರಾಮ ಶರ್ಮ, ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್. ಪದ್ಮ ಗೌಡ, ಸಮಿತಿಯ ಸದಸ್ಯರು, ಊರ, ಪರವೂರ ಭಕ್ತರು ಉಪಸ್ಥಿತರಿದ್ದರು.