Site icon Suddi Belthangady

ಭೀಕರ ಗಾಳಿಗೆ ಮರೋಡಿ ಗ್ರಾಮದಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬ, ನೇತಾಡುತ್ತಿರುವ ತಂತಿಗಳು

ಮರೋಡಿ: ನಾರಾವಿ ಹಾಗೂ ಶಿರ್ತಾಡಿ ಕಡೆ ಹೋಗುವ ರಸ್ತೆಯಲ್ಲಿ ಭಾರೀ ಮಳೆ ಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ವಿದ್ಯುತ್ ತಂತಿಗಳು ರಸ್ತೆಯ ಮೇಲೆ ನೇತಾಡುತ್ತಿದೆ. ರಾತ್ರಿಯಿಂದ ಕರೆಂಟ್ ಇಲ್ಲದೆ ಗ್ರಾಮದ ಜನ ತತ್ತರಿಸಿ ಹೋಗಿದ್ದಾರೆ. ಮಾ. 12ರ ಸಂಜೆ 6 ಗಂಟೆ ಸುಮಾರಿಗೆ ವಿದ್ಯುತ್ ಕಂಬ ಬಿದ್ದಿದ್ದು, ಇದೀಗ 20 ತಾಸು ಕಳೆದರೂ ವಿದ್ಯುತ್ ಕಂಬ ದುರಸ್ತಿ ಆಗದಿರುವ ಬಗ್ಗೆ ಸ್ಥಳೀಯರು ಕಿಡಿಕಾರುತ್ತಿದ್ದಾರೆ.

Exit mobile version