Site icon Suddi Belthangady

ಮಡಂತ್ಯಾರಿನಲ್ಲಿ ನಂ.1 ಬ್ರ್ಯಾಂಡ್ ಕ್ರಿಯಾಂಝ ಟೈಲ್ಸ್ ಶೋ ರೂಂ – ಪ್ರಗತಿ ಎಂಟರ್‌ಪ್ರೈಸಸ್‌ಗೆ ಹೊಸ ಸೇರ್ಪಡೆ ಕ್ರಿಯಾಂಝ

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ ಮಡಂತ್ಯಾರು. ಇಲ್ಲಿ ಕಳೆದ 25 ವಷಗಳಿಂದ ಮನೆ ಕಟ್ಟಲು ಬೇಕಾದ ವಸ್ತುಗಳನ್ನು ನೀಡುವುದರಲ್ಲಿ ನಂ.1 ಎನಿಸಿಕೊಂಡಿರುವ ಜಯಂತ್ ಶೆಟ್ಟಿ ಮಾಲಕತ್ವದ ಪ್ರಗತಿ ಎಂಟರ್ ಪ್ರೈಸಸ್ ಇದೀಗ ನಗರ ಪ್ರದೇಶಕಷ್ಟೇ ಸೀಮಿತವಾಗಿದ್ದ ಬ್ರ್ಯಾಂಡ್ ಟೈಲ್ಸ್ ನ ಶೋ ರೂಂನ್ನು ತನ್ನ ಸಂಸ್ಥೆಗೆ ಸೇರ್ಪಡೆಗೊಳಿಸಿದೆ.

ದೇಶದ ನಂಬರ್ ವನ್ ಬ್ರ್ಯಾಂಡ್ ಆಗಿರುವ ಕ್ರಿಯಾಂಝ ಟೈಲ್ಸ್ ಶೋ ರೂಂ ಪ್ರಗತಿ ಎಂಟರ್ಪ್ರೈಸಸ್‌ನಲ್ಲಿ ಶುಭಾರಂಭಗೊಂಡಿದೆ. ಕ್ರಿಯಾಂಝ ಕಂಪೆನಿ ನಿರ್ದೇಶಕ ಸೌರಭ್ ಮಂತ್ರಿಯವರು ಕ್ರಿಯಾಂಝ ಶೋ ರೂಂ ಉದ್ಘಾಟಿಸಿ, “ ಈ ಪ್ರದೇಶದಲ್ಲಿ ನಮ್ಮ ಮೊದಲ ಶೋರೂಂ ಇದು. ಜಗತ್ತಿನ ಮೂಲೆ ಮೂಲೆಯಲ್ಲಿ ಕ್ರಿಯಾಂಝದ ಶೋರೂಂಗಳಿವೆ. 50 ಕ್ಕೂ ಹೆಚ್ಚಿನ ದೇಶಗಳಲ್ಲಿ ಕ್ರಿಯಾಂಝ ಪ್ರಾಡಕ್ಡ್ ಎಕ್ಸ್ ಪೋರ್ಟ್ ಆಗುತ್ತಿದೆ. ಇಲ್ಲಿ ಕೂಡ ನಮ್ಮ ಕ್ರಿಯಾಂಝ ಟೈಲ್ಸ್ ಬ್ರ್ಯಾಂಡ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿ ಯಶಸ್ಸು ಪಡೆಯುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಗತಿ ಎಂಟರ್ ಪ್ರೈಸಸ್ ಮಾಲಕರಾದ ಜಯಂತ್ ಶೆಟ್ಟಿ, ತನ್ನ ಹೊಸ ಶೋ ರೂಂ ಕುರಿತಾಗಿ ಮಾತನಾಡಿ, “25 ವಷದ ಹಿಂದೆ ಬಹಳ ಸಣ್ಣ ರೀತಿಯಲ್ಲಿ ಪ್ರಗತಿ ಎಂಟರ್ಪ್ರೈಸಸ್ ಆರಂಭ ಆಗಿತ್ತು. ಈ ಊರಿನ ಜನರ, ಗ್ರಾಹಕ ಬಂಧುಗಳ ಸಹಕಾರದಿಂದ ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತು. ನಮ್ಮಲ್ಲಿ ಬೇರೆ ಬೇರೆ ಟೈಲ್ಸ್ ಇದ್ದರೂ ಬ್ರ್ಯಾಂಡೆಡ್ ಟೈಲ್ಸ್ ಇರಲಿಲ್ಲ. ಹಾಗಾಗಿ ಹೊಸ ಉತ್ಪನ್ನ ಜೊತೆಗೆ ಉತ್ಕೃಷ ಗುಣಮಟ್ಟದ ಬ್ರ್ಯಾಂಡೆಡ್ ಟೈಲ್ಸ್‌ನ್ನು ಈ ಊರಿಗೆ ಪರಿಚಯಿಸಬೇಕು ಅನ್ನುವ ಉದ್ದೇಶದಿಂದ ಕ್ರಿಯಾಂಝ ಟೈಲ್ಸ್ ಶೋ ರೂಂ ತೆರೆದಿದ್ದೇವೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕ್ರಿಯಾಂಝ ನಂ.1 ಬ್ರ್ಯಾಂಡ್ ಆಗಿದೆ. ಅಂತಹ ಟೈಲ್ಸ್‌ನ್ನು ಹಳ್ಳಿ ಭಾಗದಲ್ಲಿ ಅತ್ಯಾಧುನಿಕ ಸ್ಟುಡಿಯೋ ಮೂಲಕ ಪರಿಚಯ ಮಾಡುವ ಭಾಗ್ಯ ಸಿಕ್ಕಿದೆ. ರೇಂಜ್ ಆಫ್ ಪ್ರಾಡಕ್ಸ್, ಒಬ್ಬ ಆರ್ಕಿಟೆಕ್ಸ್‌ಗೆ ಬೇಕಾದಂತಹ ಡಿಸೈನ್‌ನ ಟೈಲ್ಸ್ ಇಲ್ಲಿ ಸಿಗುತ್ತದೆ. ವಿಶೇಷ ಅಂದರೆ ಇಲ್ಲಿ ನೇರವಾಗಿ ಫ್ಯಾಕ್ಟರಿಯಿಂದ ಟೈಲ್ಸ್ ಬರುತ್ತದೆ, ಹಾಗಾಗಿ ಮಧ್ಯವರ್ತಿ ಇಲ್ಲದೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಟೈಲ್ಸ್ ಸಿಗುತ್ತದೆ” ಎಂದು ಕ್ರಿಯಾಂಝ ಟೈಲ್ಸ್ ಬಗ್ಗೆ ಮಾಹಿತಿ ಕೊಟ್ಟರು.

“ಜಯಂತ ಶೆಟ್ಟಿಯವರ ಪ್ರಗತಿ ಎಂಟರ್ ಪ್ರೈಸಸ್‌ನವರ ವಿಚಾರ ಎಲ್ಲರನ್ನೂ ಪುಳಕಿತಗೊಳಿಸುತ್ತದೆ. ಅವರ ಸಂಸ್ಥೆ ಮೂಲಕ ಮಂಡಂತ್ಯಾರು, ಪೂಮಜಾಲ್ ಕಟ್ಟೆ ಊರಿನ ಪ್ರಗತಿ ಆಗಿದೆ. ಜನರಿಗೆ ಅತ್ಯಮೂಲ್ಯ ಕೊಡುಗೆಯನ್ನು ಪ್ರಗತಿ ಎಂಟರ್ ಪ್ರೈಸಸ್ ಕೊಡುತ್ತಿದೆ, ಈ ಸಂಸ್ಥೆ ಇನ್ನಷ ಅಭಿವೃದ್ಧಿ ಆಗಲಿ ಎಂದು ಉದ್ಘಾಟನಾ ಸಮಾರಂಭಕ್ಕೆ ಬಂದ ಮಡಂತ್ಯಾರು ಸೇಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ಸ್ಟ್ಯಾನಿ ಗೋವಿಯಸ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕೊಲ್ಪೆದಬೈಲ್‌ನ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಮಾತನಾಡಿ, “ಜಯಂತ್ ಶೆಟ್ಟಿಯವರು ಈ ವಿಭಾಗವನ್ನು ತೆರೆದಿರುವುದು ಬಹಳ ಸಂತಸದ ವಿಷಯ. ಅವರು ಈ ಸಂಸ್ಥೆಯ ಮೂಲಕ ಎಲ್ಲರಿಗೂ ಆದರ್ಶವಾಗಿದ್ದಾರೆ. ಅವರಲ್ಲಿ ನಾಯಕತ್ವ ಗುಣವಿದೆ, ಅವರ ವ್ಯಾವಹಾರಿಕ ಜೀವನ ಯುವ ಸಮುದಾಯಕ್ಕೆ ಮಾದರಿಯಾಗಿದೆ” ಎಂದರು.
ಮಡಂತ್ಯಾರು ಅಭಿವೃದ್ಧಿ ಹೊಂದುತ್ತಿರುವ ಪೇಟೆ, ಇಲ್ಲಿ ಪ್ರತಿಯೊಂದು ಮೂಲಭೂತ ಸೌಕರ್ಯಗಳು ಇದೆ. ಬೇರೆ ಊರಿಂದ ಇಲ್ಲಿಗೆ ಬರುತ್ತಾರೆ. ಆದರೆ ಒಂದು ಬ್ರ್ಯಾಂಡ್ ಟೈಲ್ಸ್ ಇಲ್ಲ ಅನ್ನುವ ಕೊರಗು ಅನೇಕರಲ್ಲಿತ್ತು. ಅದನ್ನು ಪ್ರಗತಿ ಎಂಟರ್ ಪ್ರೈಸಸ್ ನೀಗಿಸಿದೆ ಎಂದು ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ರೂಪ ನವೀನ್ ಶುಭ ಹಾರೈಸಿದರು. ಮಾಲಾಡಿ ಗ್ರಾ. ಪಂ ಅಧ್ಯಕ್ಷ ಪುನೀತ್ ಕುಮಾರ್ ಮಡಂತ್ಯಾರಿನಲ್ಲಿ ಕ್ರಿಯಾಂಝ ಟೈಲ್ಸ್ ಪರಿಚಯಿಸಿರುವುದಕ್ಕೆ ಜಯಂತ್ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು.

ಮಡಂತ್ಯಾರು ವರ್ತಕರ ಸಂಘದ ಉಪಾಧ್ಯಕ್ಷರಾದ ಯೋಗಿಶ್ ಪೂಜಾರಿ ಮಾತನಾಡಿ, “ಜಯಂತ್ ಅವರ ಗ್ರಾಹಕ ಸ್ನೇಹಿ ವ್ಯಕ್ತಿತ್ವ ಜೊತೆ ಎಲ್ಲರನ್ನೂ ಪ್ರೀತಿಯಿಂದ ಗೌರವಿಸುವ ಗುಣದಿಂದಲೇ ಈ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ. ಇದೀಗ ದೂರದೃಷ್ಟಿ ಕಲ್ಪನೆ ಇಟ್ಟುಕೊಂಡು ಕ್ರಿಯಾಂಝ ಟೈಲ್ಸ್ ಶೋ ರೂಂ ತೆರೆದಿದ್ದಾರೆ. ಒಂದು ಮನೆ ಕಟ್ಟಲು ತಳಮಟ್ಟದಿಂದ ಏನೆಲ್ಲಾ ಬೇಕೋ ಎಲ್ಲವೂ ಇದೆ. ದೇಶದ ನಂ.1 ಬ್ರ್ಯಾಂಡ್ ಕ್ರಿಯಾಂಝ ಟೈಲ್ಸ್ ಕೂಡ ಸೇರ್ಪಡೆಗೊಂಡಿರುವುದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಮಡಂತ್ಯಾರಿನ ಪ್ರಗತಿ ಎಂಟರ್ ಪ್ರೈಸಸ್‌ನ ಕ್ರಿಯಾಂಝ ಟೈಲ್ಸ್ ಶೋ ರೂಂ ಉದ್ಠಾಟನಾ ಸಮಾರಂಭದಲ್ಲಿ, ಹಿರಿಯ ಉದ್ಯಮಿ ವಿಠ್ಠಲ್ ಶೆಟ್ಟಿ ಮೂಡಾಯೂರು, ಕ್ರಿಯಾಂಝದ ಜನರಲ್ ಮ್ಯಾನೇಜರ್ ಜೊಯೆಲ್ ಜೆಸ್‌ಲಿನ್, ಸೀನಿಯರ್ ರೀಜನಲ್ ಮ್ಯಾನೇಜರ್ ಸತೀಶ್, ಸೀನಿಯರ್ ಏರಿಯಾ ಸೇಲ್ಸ್ ಮ್ಯಾನೇಜರ್ ಮಹೇಶ್, ಬ್ರ್ಯಾಂಡಿಂಗ್ ಡೆಪ್ಯುಟಿ ಮ್ಯಾನೇಜರ್ ಕಿರಣ್, ಪ್ರಗತಿ ಎಂಟರ್‌ಪ್ರೈಸಸನ್‌ನ ಅಜಯ್ ಜೆ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರತಿನಿಧಿ ಜಯರಾಮ್ ಭಂಡಾರಿ, ನೂತನ್ ಕ್ಲೋತ್ ಸೆಂಟರ್‌ನ ಪ್ರಕಾಶ್ ರೋಡ್ರಿಗಸ್, ಅಮಿತಾ ಅಶೋಕ್, ಸಂಗೀತಾ ಶೆಟ್ಟಿ, ಕಿರಣ್ ಶೆಟ್ಟಿ, ಶ್ರೀಧರ್ ಶೆಟ್ಟಿ , ಉಮೇಶ್ ಶೆಟ್ಟಿ,ವಾಸುದೇವ್ ಉಪಸ್ಥಿತರಿದ್ದರು.

ಪಾರೆಂಕಿ ದೇವಸ್ಥಾನದ ಹಿರಿಯ ಅರ್ಚಕರಾದ ಶ್ರೀಧರ್ ಭಟ್ ಪ್ರಾರ್ಥನೆ ಸಲ್ಲಿಸಿದರು. ರೋಟರ್ ಕ್ಲಬ್ ಕಾರ್ಯದರ್ಶಿ ತುಳಸಿದಾಸ್ ಪೈ ನಿರೂಪಣೆ ಮಾಡಿ ಧನ್ಯವಾದ ಸಲ್ಲಿಸಿದರು.

Exit mobile version