ಮರೋಡಿ: ಮಾ.12ರಂದು ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆ ಮೇಲೆ ಬಿದ್ದು ಮನೆಗೆ ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ.
ಸಂಜೆ 6.30ಕ್ಕೆ ಸುರಿದ ಜೋರಾದ ಮಳೆಗೆ ಬೃಹತ್ ಗಾತ್ರದ ಮರ ಬುಡ ಸಮೇತ ಸಂತೋಷ್ ದೇವಾಡಿಗರವರ ಮನೆಯ ಮೇಲೆ ಉರುಳಿ ಬಿದ್ದಿದೆ. ಮನೆಯಲ್ಲಿ ಸಂತೋಷ ದೇವಾಡಿಗ ಅವರ ತಾಯಿ ಲಲಿತಾ, ತಮ್ಮ ಸಂದೀಪ್ ದೇವಾಡಿಗ, ತಮ್ಮನ ಪತ್ನಿ ರಜನಿ, ಸಣ್ಣ ಪ್ರಾಯದ ಮಗು ಮನೆಯೊಳಗೆ ಇದ್ದರು. ಜೋರಾದ ಶಬ್ದ ಬಂದಾಗ ಎಲ್ಲರೂ ಮನೆಯ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಹಂಚು, ಶೀಟ್, ಅಡುಗೆ ಪಾತ್ರೆ, ಟಿವಿ, ಕಿಟಕಿ, ದಾರಂದ, ವಿದ್ಯುತ್ ಉಪಕರಣಗಳು ಎಲ್ಲವೂ ಹಾನಿಗೊಳಗಾಗಿದೆ. ಲಕ್ಷಾಂತರ ರೂ ನಷ್ಟ ಸಂಭವಿಸಬಹುದೆಂದು ತಿಳಿದು ಬಂದಿದೆ.