ಬೆಳಾಲು: ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಊರಿನ ಗಣ್ಯರೂ, ವೃತ್ತಿ ಪ್ರವೃತ್ತಿಯಲ್ಲಿ ಉತ್ತಮ ಸೇವೆಯನ್ನು ನೀಡಿರುವ ಯಕ್ಷಗಾನ ಕಲಾವಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಳಿತ್ತಡಿ ಲಕ್ಷ್ಮಣ ಗೌಡ ಬೆಳಾಲು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೇವಪ್ಪ ಎಮ್. ಕೆ. ಮತ್ತು ಖ್ಯಾತ ಕಾಷ್ಠ ಶಿಲ್ಪಿ ಶಶಿಧರ ಆಚಾರ್ಯ ಮಾಯಾ ಇವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರ ಪರವಾಗಿ ಸನ್ಮಾನಿಸಲಾಯಿತು.
ತಂತ್ರಿಗಳಾದ ವೇದಮೂರ್ತಿ ಅಲಂಬಾಡಿ ಪದ್ಮನಾಭ ತಂತ್ರಿಗಳು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್. ಪದ್ಮ ಗೌಡರು ಸನ್ಮಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೋಕ್ತೆಸರ ಮಾಯ ಗುತ್ತು ಪುಷ್ಪದಂತ ಜೈನ್, ನಿವೃತ್ತಕೃಷಿ ಅಧಿಕಾರಿ ನಾರಾಯಣ ಸುವರ್ಣ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಾಮೋದರ ಗೌಡ ಸುರುಳಿ, ದಯಾನಂದ ಪಿ. ಬೆಳಾಲು, ರಾಜಪ್ಪ ಗೌಡ
ಪುಚ್ಚೆಹಿತ್ಲು, ಸುರೇಶ್ ಭಟ್ ಪರಂಗಜೆ, ದಿನೇಶ ಎಂ. ಕೆ., ವಾರಿಜ ಗುಂಡ್ಯ, ಕವಿತಾ ಉಮೇಶ್ ಮಂಜೊತ್ತು, ಉಪಸ್ಥಿತರಿದ್ದರು.
ಶಿಕ್ಷಕರಾದ ಧರ್ಮೇಂದ್ರ ಕುಮಾರ್ ಮತ್ತು ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರ್ವಹಿಸಿದರು.