Site icon Suddi Belthangady

ನಿಡಿಗಲ್ ಹೊಸ ಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ದಂಡ ವಿಧಿಸಿದ ಮುಂಡಾಜೆ ಗ್ರಾಮ ಪಂಚಾಯತ್

ಬೆಳ್ತಂಗಡಿ: ಕಳೆದ ವಾರವಷ್ಟೇ ನಿಡಿಗಲ್ ಹಳೇಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ರೂಪಾಯಿ 2000 ದಂಡ ವಿಧಿಸಿದ ಘಟನೆ ಮುಂಡಾಜೆ ಗ್ರಾಮ ಪಂಚಾಯತ್ ನಿಂದ ನಡೆದಿದ್ದು, ಅಂಥದ್ದೇ ಘಟನೆ ಮತ್ತೆ ಮಾರುಕಳಿಸಿದೆ.

ಮಾ. 11ರಂದು ಬೆಳಗಿನ ಹೊತ್ತು ನಿಡಿಗಲ್ ಹೊಸ ಸೇತುವೆಯ ಬಳಿ ತ್ಯಾಜ್ಯ ಕಂಡುಬಂದಿದ್ದು, ಯಾರೋ ನದಿಯನ್ನು ಗುರಿಯಾಗಿಸಿ ಎಸೆದ ತ್ಯಾಜ್ಯವು ಸೇತುವೆಯ ಮೇಲೆ ಬಿದ್ದಿರುತ್ತದೆ.

ಈ ಕಸದ ಚೀಲವನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕೆಲವು ದಾಖಲೆಗಳು ಸಿಕ್ಕಿದ್ದು ಅದು ಉಜಿರೆಯ ವ್ಯಕ್ತಿಗಳದ್ದೆoದು ತಿಳಿದುಬಂತು.

ಕೂಡಲೇ ಅವರನ್ನು ದೂರವಾಣಿ ಮೂಲಕ ಸ್ಥಳಕ್ಕೆ ಕರೆಸಿ ಅವರಿಂದಲೇ ಕಸ ವಿಲೇವಾರಿ ಮಾಡಿಸಿ ರೂಪಾಯಿ 1000 ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ತಿಳಿಸಿದ್ದಾರೆ.

Exit mobile version