ಧರ್ಮಸ್ಥಳ: ಕನ್ಯಾಡಿ ಪುಡ್ಕೆತ್ ಚಡವು ಬಳಿ ಕೆ. ಎಸ್. ಆರ್. ಟಿ. ಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿವೆ.
ಉಜಿರೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೆಂಕಟರಮಣ ಎಂಬವರಿಗೆ ಸೇರಿದ ಕಾರಿಗೆ, ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬಂದು ಹಾವೇರಿಗೆ ಹೊರಟಿದ್ದ ಕೆ. ಎಸ್. ಆರ್. ಟಿ. ಸಿ ಬಸ್ ಡಿಕ್ಕಿಯಾಗಿದ್ದು ಕಾರು ಮತ್ತು ಬಸ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.