Site icon Suddi Belthangady

ಮಚ್ಚಿನ ಸ. ಪ್ರೌ. ಶಾಲಾ ಮಕ್ಕಳ ಟ್ಯೂಷನ್ ತರಗತಿ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಮಡಂತ್ಯಾರು ವಲಯದ ಮಚ್ಚಿನ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 3 ತಿಂಗಳಿನಿಂದ ನಡೆಸಿದ್ದ ಟ್ಯೂಷನ್ ಕ್ಲಾಸ್ ಹಮ್ಮಿ ಕೊಂಡಿದ್ದು ಸಮಾರೋಪ ಕಾರ್ಯಕ್ರಮವನ್ನು ನಡೆಸಲಾಯಿತು.

ಮಡಂತ್ಯಾರು ವಲಯದ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಹರ್ಷ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬಹಳಷ್ಟು ಕಾರ್ಯಕ್ರಮಗಳು ನಡೆಯುತ್ತಿದ್ದು ಇದೀಗ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಹೇಮಾವತಿಯವರ ಮಾರ್ಗದರ್ಶನದಲ್ಲಿ ಎಸ್. ಎಸ್. ಎಲ್. ಸಿ ಮಕ್ಕಳಿಗೆ ಟ್ಯೂಷನ್ ಕ್ಲಾಸನ್ನು ಮಾಡುತ್ತಿದ್ದಾರೆ. ನಿಮಗೆ ಸಿಕ್ಕಿದಂತಹಾ ಅವಕಾಶವನ್ನು ಬಳಕೆ ಮಾಡಿಕೊಂಡು ಶೇ. 100 ಫಲಿತಾಂಶ ದಾಖಲಿಸಬೇಕೆಂದರು.

ಮುಖ್ಯ ಶಿಕ್ಷಕ ಪ್ರಕಾಶ್ ನಾಯಕ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಅನುಷ್ಠಾನ ಮಾಡಿರುವುದು ಸಂತೋಷಕರವಾಗಿದೆ ಹಾಗೂ ಮಕ್ಕಳ ವಿದ್ಯಾಭ್ಯಾಸ ದಲ್ಲಿ ಬದಲಾವಣೆ ತಂದಿದೆ ಎಂದರು.
ಮಡಂತ್ಯಾರು ವಲಯ ಮೇಲ್ವಿಚಾರಕ ಜನಾರ್ದನ್ ಯೋಜನೆಯ ಕಾರ್ಯಕ್ರಮಗಳು ಹಾಗೂ ಬೆಳೆದು ಬಂದ ಹಾದಿ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮ ಗಳ ಬಗ್ಗೆ ಮಾತಾಡಿದರು.

ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು.

ಸೇವಾಪ್ರತಿನಿಧಿ ಪರಮೇಶ್ವರ್ ನಿರೂಪಿಸಿದರು. ವಿಶೇಷ ತರಗತಿಯ ವಿದ್ಯಾರ್ಥಿ ಭವ್ಯ, ಚೈತ್ರ, ಯಕ್ಷಿತ್ ಅನಿಸಿಕೆ ಹೇಳಿದರು. ಶಾಲಾ ಶಿಕ್ಷಕರು, ವಲಯಾಧ್ಯಕ್ಷ ಜಯ ಪೂಜಾರಿ ಹಾಗೂ ವಿಶೇಷ ತರಗತ ಯ 52 ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕಿ ಶಿವಾನಿ ಶೇಟ್ ವಂದಿಸಿದರು.

Exit mobile version