Site icon Suddi Belthangady

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಳ್ತಂಗಡಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಮಾ. 9ಮತ್ತು 10 ರಂದು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ (ರಿ ) ಶಿಬರಾಜೆ ಪಾದೆ, ವೇದಿಕೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎರಡು ದಿನಗಳ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಹಿಳೆಯರ ಸಬಲೀಕರಣ, ಶಿಕ್ಷಣ, ಮತ್ತು ಆರೋಗ್ಯದ ಮಹತ್ವವನ್ನು ಒಳಗೊಂಡ ವಿಚಾರಸಂಕಿರಣಗಳು, ಕಾರ್ಯಾಗಾರಗಳನ್ನು ಒಳಗೊಂಡ ಕಾರ್ಯಕ್ರಮವನ್ನು HGF ಜೇಸಿಂತಾ ಡಿಸೋಜ ಅವರು ಉದ್ಘಾಟಿಸಿ, ಅಂತರಾಷ್ಟ್ರೀಯ ಮಹಿಳಾ ದಿನದ ಮಹತ್ವವನ್ನು ವಿವರಿಸಿದರು. ಮಹಿಳಾ ಸಬಲೀಕರಣದ ಅಗತ್ಯತೆ, ಸಮಾಜದಲ್ಲಿ ಮಹಿಳೆಯರ ಪಾತ್ರ,
ಶಿಕ್ಷಣ ಮತ್ತು ಆರ್ಥಿಕ ಸ್ವಾಯತ್ತತೆಯ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಮಹಿಳಾ ಸಬಲೀಕರಣ ಫಲಕ ಬಿಡುಗಡೆ ಗೊಳಿಸಲಾಯಿತು.

ಮುಖ್ಯ ಅತಿಥಿಗಳ ಪರಿಚಯವನ್ನು ಜೆಸಿ ಕವಿತಾ ವಾಚಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಯೋಜನೆ ನಿರ್ದೇಶಕರಾದ ಪ್ರಿಯಾ ಜೆ ಅಮೀನ್ ಮತ್ತು ತರಬೇತುದಾರರದ ಸುಖಲತಾ ರೈ ಗುತ್ತಿಮಾರ್ ಮತ್ತು ಸ್ವಾತಿ ಬಿ ಶೆಟ್ಟಿ, ಆಶಾಕಾರ್ಯಕರ್ತೆ ಮೀನಾಕ್ಷಿ, ಘಟಕದ ಮಾರ್ಗದರ್ಶಕರಗಿರುವ HGF ಜೋಸೆಫ್ ಪಿರೇರಾ, ನಿಕಟಪೂರ್ವಧ್ಯಕ್ಷರಾದ ಜೆಸಿ ಸಂತೋಷ್ ಜೈನ್, ಘಟಕದ ಮಾಧ್ಯಮ ಸಾoಯೋಜಕರರಾದ ಜೆಸಿ ಅಕ್ಷತ್ ರೈ, ಜೆ ಸಿ ಧನುಷ್ ಜೈನ್, ಜೆ ಸಿ ಕವಿತಾ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಈ ಸಂದರ್ಭದಲ್ಲಿ, ಹಲವಾರು ಮಹಿಳಾ ಮುಖಂಡರು, ಸ್ಥಳೀಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜೆಸಿ ಸೆನ್ . ಜಿತೇಶ್ ಪಿರೇರಾ ಕಾರ್ಯಕ್ರಮವನ್ನು ನಿರೂಪಿಸಿ, JC ಡಾ. ಶೋಭಾ ಪಿ ಸ್ವಾಗತಿಸಿ, ಜೆಸಿ ಎಲ್ ಟಿ ದಕ್ಷ ಜೈನ್ ಜೇಸಿವಾಣಿ ವಾಚಿಸಿದರು. JC ಚಂದನ ಪಿ ಧನ್ಯವಾದವಿತ್ತರು.

Exit mobile version