Site icon Suddi Belthangady

ಅಳದಂಗಡಿ: ಬಸವ ಅಕ್ಯು ಅಕಾಡೆಮಿ ವತಿಯಿಂದ ಸುಕೇಶ್ ಜೈನ್ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಅಳದಂಗಡಿ: ಬಸವ ಅಕ್ಯು ಅಕಾಡೆಮಿ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮಾ.09ರಂದು ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ ಅಜಿಲರವರು ದೀಪಪ್ರಜ್ವಲಿಸಿ ಉಧ್ಘಾಟಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರು ಹೊಸ ವಿಧಾನದ ಔಷಧರಹಿತ ವೈದ್ಯಕೀಯ ಚಿಕಿತ್ಸಾ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಸಭೆಯಲ್ಲಿ ಅಳದಂಗಡಿ ಸಿಎ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ಖ್ಯಾತ ಪಾಕತಜ್ಞ ನಾಗಕುಮಾರ್ ಜೈನ್, ಅಳದಂಗಡಿ ಮುಖ್ಯ ಅತಿಥಿಗಳಾಗಿ ಭಾಗಿಯಾದರು. ಶಿಬಿರದ ರೂವಾರಿ ಅಳದಂಗಡಿ ಪದ್ಮಾಂಭಾ ಎರೇಂಜರ್ಸ್ ನ ಮಾಲಕರು, ಅಕಾಡೆಮಿಯ ಸದಸ್ಯರಾದ ಸುಕೇಶ್ ಜೈನ್, ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.

ರೂಪಾ ಗಣೇಶ್ ಪ್ರಾಸ್ತಾವಿಕ ಮಾತನ್ನಾಡಿದರು. ಪ್ರಶಾಂತ್ ಕುಮಾರ್ ಸ್ವಾಗತಿಸಿ,ಶ್ರೀಮತಿ ಸಬಿತಾ ಧನ್ಯವಾದ ಸಲ್ಲಿಸಿದರು. ಟೀಂ ಅಭಯಹಸ್ತ ಬೆಳ್ತಂಗಡಿ ಇದರ ಪ್ರಧಾನ ಸಂಚಾಲಕ ಸಂದೀಪ್ ಎಸ್ ನೀರಲ್ಕೆ ಕಾರ್ಯಕ್ರಮ ನಿರೂಪಿಸಿದರು. ಸಂಜೆ 04.00 ಗಂಟೆಯವರೆಗೆ ಜರುಗಿದ ಶಿಬಿರದಲ್ಲಿ ಗ್ರಾಮಸ್ಥರು ಹಾಗೂ ತಾಲೂಕು, ಹೊರಜಿಲ್ಲೆಯ ನಾಗರಿಕರು ಭಾಗಿಯಾಗಿ ಶಿಬಿರದ ಅನುಕೂಲತೆ ಪಡೆದುಕೊಂಡರು.

Exit mobile version