Site icon Suddi Belthangady

ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಅನಾರೋಗ್ಯದಲ್ಲಿರುವ ಇಂದಬೆಟ್ಟು ಗ್ರಾಮ ಪಂಚಾಯತ್ ನೌಕರ ಗೋಪಾಲರಿಗೆ ಆರ್ಥಿಕ ನೆರವು, ಪಡಿತರ ವಿತರಣೆ

ಇಂದಬೆಟ್ಟು: ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗೋಪಾಲ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುಶೀಲ ಹೆಗ್ಡೆ, ರತ್ನರಾಜ ಹೆಗ್ಡೆ, ರೊನಾಲ್ಡ್ ತಾವ್ರ್ಹೋ, ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಇವರುಗಳ ಸಹಕಾರದೊಂದಿಗೆ ಸುಮಾರು 35,000ಗಳ ಆರ್ಥಿಕ ನೆರವನ್ನು ಚೆಕ್ ಮೂಲಕ ನೌಕರರ ಕುಟುಂಬಕ್ಕೆ ನೀಡಲಾಯಿತು ಹಾಗೂ ಪಡಿತರವನ್ನು ವಿತರಿಸಿದರು.

ಪ್ರತಿ ತಿಂಗಳು ಪಡಿತರ ನೀಡುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿ ಪ್ರಸಾದ್ ಬೊಲ್ಮ, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರುಕೇಶ್ ಕಲ್ಮಂಜ, ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ಮೀನಾಕ್ಷಿ ನಡ ಉಪಸ್ಥಿತರಿದ್ದರು.

Exit mobile version