Site icon Suddi Belthangady

ಬೆಳ್ತಂಗಡಿ: ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಬೆಳ್ತಂಗಡಿ: ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ತೋಟತ್ತಾಡಿ ಗ್ರಾಮದ ಚೀoಕ್ರ ಗೌಡ ಇವರ ಎಂಡೋ ಸೆಲ್ಫಾನ್ ಪೀಡಿತ ನಾಲ್ವರು ಮಕ್ಕಳನ್ನು ಭೇಟಿಯಾಗಿ ಕೆಲವು ಸಮಯ ಮಕ್ಕಳೊಂದಿಗೆ ಕಳೆದು ಆರ್ಥಿಕ ನೆರವನ್ನು ನೀಡುವ ಮೂಲಕ ವಿಶೇಷವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಮಿತಾ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಸುಮಂಗಲ, ಜಿಲ್ಲಾ ಮಹಿಳಾ ಕಾಂಗ್ರೆಸಿನ ಸಂಘಟನಾ ಕಾರ್ಯದರ್ಶಿ ಜೀನತ್ ಉಜಿರೆ, ಹಾಗೂ ಪದಾಧಿಕಾರಿಗಳಾದಂತಹ ಮಮತಾ, ಮಿನಿ ತೋಟತ್ತಾಡಿ, ರೀನಾ, ಸಿಂಧೂ, ಲೀಮಾ, ಸವಿತಾ, ಸುಂದರಿ, ಮಿನಿ ಪುದುವಟ್ಟು, ಲಿಸ್ಸಿ, ಯಶೋಧ,ಲಕ್ಸ್ಮಿ ಉಪಸ್ಥಿತರಿದ್ದರು.

Exit mobile version