Site icon Suddi Belthangady

ಮೂರು ತಾಲೂಕುಗಳನ್ನು ಬೆಸೆಯುವ ಕೋಡಂಗೇರಿ – ಉಪ್ಪಾರಹಳ್ಳ ಸೇತುವೆ, ಕಿಂಡಿ ಅಣೆಕಟ್ಟು ಲೋಕಾರ್ಪಣೆ

ಕೊಕ್ಕಡ: ಕೊಕ್ಕಡ ಮತ್ತು ಗೋಳಿತೊಟ್ಟು ಗ್ರಾಮದ 500ಕ್ಕೂ ಹೆಚ್ಚು ಮನೆಗಳ ನಿವಾಸಿಗಳ 40 ವರ್ಷಗಳ ಬೇಡಿಕೆಯ ರೂಪದಲ್ಲಿ ರೂ.3.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೋಡಂಗೇರಿ – ಉಪ್ಪಾರಹಳ್ಳ ಸೇತುವೆ ಹಾಗೂ ಕಿಂಡಿ ಅಣೆಕಟ್ಟನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾ.8ರಂದು ಲೋಕಾರ್ಪಣೆ ಮಾಡಿದರು. ಈ ಸೇತುವೆ ಮತ್ತು ಅಣೆಕಟ್ಟಿನ ನಿರ್ಮಾಣದಿಂದ ರೈತರಿಗೆ ನೀರಾವರಿ ಹಾಗೂ ಜನ ಸಂಪರ್ಕ ಸುಗಮಗೊಳ್ಳಲಿದೆ ಎಂದು ಹೇಳಿದರು. ಈ ವೇಳೆ ಶಾಸಕರನ್ನು ಸ್ಥಳೀಯರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ಗ್ರಾ.ಪಂ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಗ್ರಾ.ಪಂ. ನಿಕಟಪೂರ್ವಧ್ಯಕ್ಷ ಯೋಗೀಶ್ ಆಲಂಬಿಲ, ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಕೊಕ್ಕಡ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ಪುರುಷೋತ್ತಮ, ಲತಾ, ಪ್ರಮೀಳಾ, ವಿಶ್ವನಾಥ, ಜಾನಕಿ, ಜಗದೀಶ್, ವನಜಾಕ್ಷಿ, ಕೊಕ್ಕಡ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಸಹಕಾರಿ ಸಂಘದ ನಿರ್ದೇಶಕರುಗಳಾದ ವಿಠ್ಠಲ ಭಂಡಾರಿ, ಶ್ರೀನಾಥ್ ಬಡಕೈಲು, ರವಿಚಂದ್ರ ಪುಡ್ಕೆತ್ತೂರು, ಕೊಕ್ಕಡ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಪ್ರಶಾಂತ್ ಪೂವಾಜೆ, ವಿಠಲ ಕುರ್ಲೆ, ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ನವೀನ್ ರೆಖ್ಯ, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ಮನೋಜ್, ಉಮೇಶ್ ಅಲಂಗೂರು, ಗೋಳಿತೊಟ್ಟು ಗ್ರಾ.ಪಂ. ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಬಾಬು ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಜನಾರ್ಧನ ಗೌಡ, ಲೋಕೇಶ್ ಜಾರಿಗೆತ್ತಡಿ ಕೊಕ್ಕಡ, ಬಾಲಚಂದ್ರ ಗೌಡ ಪುಂಚೆತ್ತಿಮಾರು, ಅಣ್ಣು ಗೌಡ ಕೊಡಿಂಗೇರಿ, ಗಂಗಯ್ಯ ಗೌಡ ಕೊಡಿಂಗೇರಿ, ಗಣೇಶ್ ಅಶ್ವತ್ತಡಿ, ಯತೀಂದ್ರ ಗೌಡ ಕೊಕ್ಕಡ, ರಾಮಣ್ಣ ಗೌಡ ವಳಾಲು, ಉಪ್ಪಾರಪಳಿಕೆ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಾಥ್, ಬಿಜೆಪಿ ಕಾರ್ಯಕರ್ತರು ಹಾಗೂ ಕೊಡಿಂಗೇರಿ ಪರಿಸರದವರು ಉಪಸ್ಥಿತರಿದ್ದರು.

ಸೇತುವೆ ಲೋಕಾರ್ಪಣೆಗೊಂಡ ಹಿನ್ನಲೆಯಲ್ಲಿ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ಹಂತದಲ್ಲಿ ಸಂಪರ್ಕ ಮಾರ್ಗ ಸುಧಾರಣೆಗೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Exit mobile version