Site icon Suddi Belthangady

ಕಲ್ಮಂಜ: ರತ್ನಾ ಹೃದಯಘಾತದಿಂದ ನಿಧನ

ಕಲ್ಮಂಜ: ಅಕ್ಷಯ ನಗರ ನಿವಾಸಿ ರತ್ನಾ ಮಲೆಕುಡಿಯ(43 ವ) ಹೃದಯಘಾತದಿಂದ ಮಾ.09ರಂದು ನಿಧನರಾದರು.

ತೀವ್ರವಾದ ಹೃದಯಘಾತ ಕಾಣಿಸಿಕೊಂಡ ಇವರನ್ನು ತಕ್ಷಣ ಧನ್ವಿ ಆಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೃತರು ಪತಿ ಕರಿಯ ಮಲೆಕುಡಿಯ, ಹಾಗೂ 4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version