Site icon Suddi Belthangady

ಬೆಳ್ತಂಗಡಿ: ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಬೆಳ್ತಂಗಡಿ: ವಿಮೆನ್ ಇಂಡಿಯಾ ಮೂಮ್ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಮಾ.08ರಂದು ವಿಶ್ವ ಮಹಿಳಾ ದಿನಾಚರಣೆ ಕ್ಷೇತ್ರ ಅಧ್ಯಕ್ಷರಾದ ಶಮಾ ಉಜಿರೆ ಇವರ ನೇತೃತ್ವದಲ್ಲಿ ನಡೆಯಿತು. ಶಮಾ ಉಜಿರೆ ಮಾತನಾಡಿ ರಾಜಕೀಯದಲ್ಲಿ ಮಹಿಳೆಯರ ಸಬಲೀಕರಣದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ಸ್ಟಾರ್ ವುಮನ್ ಅವಾರ್ಡ್‌-2024 ಪ್ರಶಸ್ತಿ ವಿಜೇತ ಸಾಧಕಿ ಪೌಝಿಯಾ ಎಸ್.ಕೆ ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಪದಾಧಿಕಾರಿಗಳು, ಕಾರ್ಯಕರ್ತರು, ಮಹಿಳೆಯರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ತಸ್ಲಿಮಾ ಸ್ವಾಗತಿಸಿ, ಅಜ್ಮಿಯಾ ವಂದಿಸಿದರು. ನಸೀಮಾ ಕಾರ್ಯಕ್ರಮ ನಿರೂಪಿಸಿದರು.

Exit mobile version