ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಅಗ್ನಿಶಾಮಕ ವಿಧಾನಗಳು ಮತ್ತು ಸುರಕ್ಷತಾ ಕ್ರಮಗಳ ಪ್ರಾತ್ಯಕ್ಷಿಕಾ ಕಾರ್ಯಕ್ರಮ’ ಮಾ. 6ರಂದು ನಡೆಯಿತು.
ಬೆಳ್ತಂಗಡಿ ಅಗ್ನಿಶಾಮಕ ಠಾಣಾ ಅಧಿಕಾರಿಗಳಾದ ಉಸ್ಮಾನ್ ಮತ್ತು ನೀಲಯ್ಯ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಅಗ್ನಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಿ ಅಗ್ನಿ ಶಾಮಕ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.
ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಅಶೋಕ್ ಕುಮಾರ್ ವಹಿಸಿದ್ದು, ಕಾರ್ಯಕ್ರಮ ಸಂಯೋಜಕ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು. ಸಹ ಪ್ರಧ್ಯಾಪಕ ರಾಮ್ ಪ್ರಸಾದ್ ಮತ್ತು ಡಾ. ವಿನಯ ಶ್ಯಾಮ್ ಕಾರ್ಯಕ್ರಮ ನಿರ್ವಹಿಸುವಲ್ಲಿ ಸಹಕರಿಸಿದರು.