Site icon Suddi Belthangady

ನಾರಾವಿ: ಸೂರ್ಯ ಸಂಜೀವಿನಿ ಮಹಿಳಾ ಒಕ್ಕೂಟ – ಮಹಾಸಭೆ

ನಾರಾವಿ: ಮಾ. 07ರಂದು ಸೂರ್ಯ ಸಂಜೀವಿನಿ ಮಹಿಳಾ ಒಕ್ಕೂಟ (ರಿ) ಇದರ ಮಹಾಸಭೆಯನ್ನು ಗ್ರಾಮ ಪಂಚಾಯತ್ ವಠಾರದ ಕಾಶಿ ಮಠ ಸಭಾ ಭವನದಲ್ಲಿ ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷರ ಮತ್ತು ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು. ಪಂಚಾಯತ್ ಅಧ್ಯಕ್ಷರಾದ ರಾಜ ವರ್ಮ ಜೈನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾತಿ ಸ್ತ್ರೀ ಶಕ್ತಿ ಸಂಘದ ಶ್ರೀಮತಿ ಯಶೋಧ ಇವರು ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು.

ಅನುಷಾ ಒಕ್ಕೂಟದ 6ವರ್ಷದ ವರದಿ ಹಾಗೂ ಎಲ್.ಸಿ.ಆರ್.ಪಿ ಪುಷ್ಪಾ ಜಮಾ ಖರ್ಚಿನ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು. ಪಂಚಾಯತ್ ಅಧ್ಯಕ್ಷ ರಾಜ ವರ್ಮ ಜೈನ್ ಹಾಗೂ ಅಭಿವೃದ್ಧಿ ಅಧಿಕಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಸರ್ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿ ಮತ್ತು ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಸಿ.ಐ.ಎಫ್ ಸಾಲ ಪಡೆದು ಹೈನುಗಾರಿಕೆ ಮಾಡುವುದರ ಜೊತೆಗೆ ಆಟೋ ರಿಕ್ಷಾ ಚಾಲನೆ ಮಾಡಿ ಸ್ವ ಉದ್ಯೋಗ ಮಾಡುತಿರುವ ಒಕ್ಕೂಟದ ಪದಾಧಿಕಾರಿ ಅರುಣಾ ಟಿ. ಹೆಗ್ಡೆ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪದಾಧಿಕಾರಿಗಳ ಆಯ್ಕೆ ಮಾಡಿ ಪದಗ್ರಹಣವನ್ನು ಮಾಡಲಾಯಿತು. ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ, ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ, ಒಕ್ಕೂಟದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು.

ಒಕ್ಕೂಟ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಪಂಚಾಯತ್ ಸಿಬ್ಬಂದಿಗಳಿಗೆ ಸ್ಮರಣಿಕೆ ನೀಡಿ ಗುರುತಿಸಲಾಯಿತು.ಬಿ.ಸಿ. ಸಖಿ ನಿರೂಪಣೆ ಮಾಡಿ ಕೃಷಿ ಸಖಿ ಧನ್ಯವಾದವಿತ್ತರು.

Exit mobile version