
ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದಂತಹ ಚಂದ್ರಕಾಂತ ಪ್ರಭು ಇತ್ತೀಚೆಗೆ ವಯೋ ನಿವೃತ್ತಿ ಹೊಂದಿದರಿಂದ ಕೀರ್ತನಾ ಕಲಾ ತಂಡದ ವತಿಯಿಂದ ಅಭಿನಂದನೆ ಕಾರ್ಯಕ್ರಮವು ಮುಂಡಾಜೆ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರಗಿತು.
ತಂಡದ ಸಂಘಟನ ಕಾರ್ಯದರ್ಶಿಯಾದ ನಾರಾಯಣ ಶೆಟ್ಟಿ ಸಿಇಓ ಇವರಿಗೆ ಯಕ್ಷಗಾನ ಶೈಲಿಯ ಹಾಡಿನ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶ್ ಬಂಗೇರ ಕೂಳೂರು ಮುಂಡಾಜೆ ಪಂಚಾಯತ್ ಅಧ್ಯಕ್ಷರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಂಡದ ಸಂಚಾಲಕರಾದ ಮಧು ಶೆಟ್ಟಿ ಹುರ್ತಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಶೆಟ್ಟಿ ಅಗರಿ, ಮಂಡಾಜೆ ಪ್ಯಾಕ್ಸ್ ನ ನಿರ್ದೇಶಕರಾದ ಚೆನ್ನಕೇಶವ ಅರಸ ಮಜಲು, ಅಶ್ವಿನಿ ಹೆಬ್ಬಾರ್, ಲ್ಯಾoಪ್ಸ್ ಸೊಸೈಟಿ ನಿರ್ದೇಶಕಿ ಲೀಲಾವತಿ ಗೌರವ ಉಪಸ್ಥಿತರಿದ್ದರು.
ತಂಡದ ಪದಾಧಿಕಾರಿಗಳಾದಂತಹ ಮನೋಹರ ನಾಯ್ಕ,ಪ್ರದೀಪ್ ಶೆಟ್ಟಿ, ದುಗ್ಗಪ್ಪ ನಾಯ್ಕ, ವಿನೋದ್ ಶೆಟ್ಟಿ, ಪ್ರಮೋದ್ ಪೂಜಾರಿ, ಚಂದ್ರಶೇಖರ ಗೌಡ, ನಿಶ್ಮಿತಾ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಜಿತೀಕ್ಷಾ ಇವರು ಸ್ವಾಗತಿಸಿ, ಕೇಶವ ಮುಂಡಾಜೆ ಇವರು ಧನ್ಯವಾದವನ್ನು ನೀಡಿದರು. ತಂಡದ ಅಧ್ಯಕ್ಷರಾದ ಸದಾನಂದ ಬಿ ಮುಂಡಾಜೆ ಅಭಿನಂದನಾ ಭಾಷಣ ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.