ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರ ಮುತುವರ್ಜಿಯಲ್ಲಿ ಗರ್ಡಾಡಿ- ಬಳೆಂಜ ರಸ್ತೆಗೆ ರೂ. 2ಕೋಟಿ ಅನುದಾನ ಬಿಡುಗಡೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಅವಧಿಯಲ್ಲಿ ಆರ್ಥಿಕ ಅನುಮೋದನೆ ನೀಡದಂತೆ ಎಲ್ಲಾ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯವೂ ಸ್ಥಗಿತಗೊಂಡಿತ್ತು.
ಆದರೆ ಶಾಸಕ ಹರೀಶ್ ಪೂಂಜರವರ ಪ್ರಯತ್ನದಿಂದ ಇದೀಗ ಆರ್ಥಿಕ ಅನುಮೋದನೆಯೂ ದೊರಕಿದ್ದು, ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಪ್ರಾರಂಭಗೊಳ್ಳಲಿದೆ.