ಬಳಂಜ: ರಾಜ್ಯ ಮಟ್ಟದದಲ್ಲಿ ಹೆಸರನ್ನು ಪಡೆದಿರುವ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಐದನೇ ವರ್ಷಕ್ಕೆ ಹೆಜ್ಜೆ ಇಟ್ಟಿದ್ದು ಎಲ್ಲೆಡೆ ಸಂಭ್ರಮ ಮತ್ತು ಶುಭಾಶಯಗಳು ಹರಿದು ಬರುತ್ತಿದೆ.
ಮಂಡಳಿಯ ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಇವರ ನೇತೃತ್ವದಲ್ಲಿ ಆರಂಭಗೊಂಡ ಕುಣಿತ ಭಜನಾ ಮಂಡಳಿ ಇಂದು ರಾಜ್ಯ ಮಟ್ಟ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಹೆಸರನ್ನು ಪಡೆದಿದ್ದು, ಮಾ. 7ರಂದು ಉಡುಪಿಯಲ್ಲಿ ನಡೆಯುವ ಬಬ್ಬು ಸ್ವಾಮಿ ಜಾತ್ರೋತ್ಸವದಲ್ಲಿ 300ನೇ ಕುಣಿತ ಭಜನಾ ಕಾರ್ಯಕ್ರಮ ನೀಡಲು ತೆರಳಿದ್ದಾರೆ.
ಮಂಡಳಿಯ ಅಧ್ಯಕ್ಷೆಯಾಗಿ ಕು.ಜ್ಯೋತಿ ಹಾಗೂ ತರಬೇತುದಾರರಾಗಿ ಕು.ಮಾನ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.