Site icon Suddi Belthangady

ಕೊಕ್ಕಡ: ಸರಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರ – ಕೊಳವೆ ಬಾವಿಯಿಂದ ನೀರಿನ ಸಮಸ್ಯೆಗೆ ಪರಿಹಾರ

ಕೊಕ್ಕಡ: ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಕಾಡುತ್ತಿದ್ದ ನೀರಿನ ಸಮಸ್ಯೆಗೆ ಹಳೆ ವಿದ್ಯಾರ್ಥಿ ಸಂಘ ಮತ್ತು ಎಸ್‌ಡಿಎಂಸಿ ಇದರ ಪರಿಹಾರದ ದಿಸೆಯಲ್ಲಿ ಮುಂದಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮರ್ ಬೈಲಂಗಡಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ಗೌಡ ಅವರು ಇಸ್ಮಾಯಿಲ್ ಕೊಕ್ಕಡ ಅವರನ್ನು ಸಂಪರ್ಕಿಸಿ ಈ ಬಗ್ಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಇಸ್ಮಾಯಿಲ್ ಕೊಕ್ಕಡ ಅವರು ವಿದೇಶದಲ್ಲಿ ಉದ್ಯೋಗದಲ್ಲಿರುವ ತಮ್ಮ ಮಕ್ಕಳಾದ, ಈ ಶಾಲೆಯ ಹಳೆ ವಿದ್ಯಾರ್ಥಿಗಳಾದ ಅಲ್ತಾಫ್ ಮತ್ತು ಅಸಿಫ್ ಅವರ ಸಹಾಯದೊಂದಿಗೆ ಶಾಲೆಗೆ ಕೊಳವೆಬಾವಿ ಕೊರೆಸಿಸಿದರು. ಈ ಕೊಳವೆಬಾವಿಯಿಂದ ಸುಮಾರು 5 ಇಂಚಿನಷ್ಟು ನೀರು ಲಭ್ಯವಾಯಿತು. ಇದರಿಂದ ವಿದ್ಯಾರ್ಥಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಈ ಮಹತ್ವದ ಕೊಡುಗೆಗಾಗಿ ಮುಖ್ಯಶಿಕ್ಷಕರು, ಅಧ್ಯಾಪಕ ವೃಂದ, ಶಾಲಾ ಮಕ್ಕಳು, ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಆಡಳಿತ ಮಂಡಳಿ ಇಸ್ಮಾಯಿಲ್ ಕೊಕ್ಕಡ ಹಾಗೂ ಅವರ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

Exit mobile version