Site icon Suddi Belthangady

ಮಾ. 6: ಎಸ್. ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ: ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಎದುರುಗಡೆ ಇರುವ ಸೀಕ್ವೇರಾ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿದ್ದ ಎಸ್.ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಸೆಂಟರ್ ಬೆಳ್ತಂಗಡಿ ಬಸ್ಟಾಂಡ್‌ನಲ್ಲಿರುವ ನೂತನ್ ಡ್ರೆಸ್ಸಸ್‌ನ ಮೊದಲ ಮಹಡಿಗೆ ಮಾ. 6ರಂದು ಸ್ಥಳಾಂತರಗೊಂಡು ಪುನರಾರಂಭಗೊಂಡಿತು.

ಜ್ಯೋತಿಷಿ ಹಾಗೂ ಪುರೋಹಿತ ಪ್ರಭಾಕರ ಭಟ್ ಇಡ್ಯಾ ಸೈಬರ್ ಸೆಂಟರನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಳೆದ 27 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸಂಸ್ಥೆಯು ಮತ್ತೊಮ್ಮೆ ಯಶಸ್ಸಿನ ದಾರಿಯಲ್ಲಿ ಸಾಗಲಿ ಎಂದು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರು ಮಾತನಾಡಿ ಸಹೃದಯತೆ, ಪ್ರೀತಿ, ಸೇವೆ ಮತ್ತು ವಿಶ್ವಾಸ ಎಂಬ ಬೆಲೆ ಕಟ್ಟಲಾಗದ ಸಂಗತಿಗಳನ್ನು ಮುಂದಿಟ್ಟುಕೊಂಡು ಮಾಡಿದ ಜನತಾ ಸೇವೆಯಲ್ಲಿ ಜನಾರ್ಧನನನ್ನು ಕಾಣುವುದು ಸತ್ಯವಾದ ಸಂಗತಿ ಎಂದು ಶುಭ ಹಾರೈಸಿದರು.

ಈ ನೂತನ ಸೈಬರ್ ಸೆಂಟರ್‌ನಲ್ಲಿ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವೀಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ, ಆರ್‌ಟಿಸಿ, ಕಲರ್ ಜೆರಾಕ್ಸ್ ಹಾಗೂ ಎಲ್ಲಾ ತರಹದ ಆನ್‌ಲೈನ್ ಸೇವೆಗಳು ಲಭ್ಯವಿದೆ ಎಂದು ಮಾಲಕ ದಯಾನಂದ ನಾಯಕ್ ತಿಳಿಸಿದರು.

ಈ ಸಂದರ್ಭದಲ್ಲಿ ಶಾರದಾ ದಯಾನಂದ್ ನಾಯಕ್, ನಿಧೀಶ್ ನಾಯಕ್, ಸದಾನಂದ ಪ್ರಭು ಹೀರ್ತೊಟ್ಟು, ಸುಧಾಕರ ಪ್ರಭು ಪರ್ಮರೋಡಿ ದಂಪತಿಗಳು, ಸುಧಾಕರ ಪ್ರಭು ಇಡ್ಯಾ, ಕಟ್ಟಡದ ಮಾಲೀಕ ಸೆಲಿನ್ ನೋರೋನ್ಹ , ನ್ಯಾನ್ಸಿ ಡಿ’ಸೋಜ, ಭಾರತಿ ಜೈನ್, ಅಂಬ್ರೊಸ್ ಡಿ’ಸೋಜ ದಂಪತಿಗಳು, ಬಾಲಕೃಷ್ಣ ಶೆಣೈ, ಯಶವಂತ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Exit mobile version