Site icon Suddi Belthangady

ಪ್ರೇರಣಾ ಹೆಗ್ಗಡೆ ವಾಹಿನಿ ಅಸ್ತಿತ್ವಕ್ಕೆ

ಬೆಳ್ತಂಗಡಿ: ಕರಾವಳಿ ಕರ್ನಾಟಕದ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಇಂದಿಗೂ ಸಾಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವ ಹೆಗ್ಗಡೆ ಸಮಾಜದ ಜನತೆಗಾಗಿ ಪ್ರಪ್ರಥಮ ಬಾರಿಗೆ ಮಾಸಿಕ ಪತ್ರಿಕೆಯೊಂದು ಪ್ರಾರಂಭವಾಗಿ ಉತ್ತಮ ಪ್ರತಿಕ್ರೀಯೆ ಪಡೆಯುತ್ತಿದೆ. ಹೆಗ್ಗಡೆ ವೆಲ್ಫೇರ್ ಫೋರಮ್ ಮತ್ತು
ಅಶ್ವಥ್ ಹೆಗ್ಡೆ ಫೌಂಡೇಶನ್ ಬಳಂಜ ಮೂಲಕ ಮೂಡಿ ಬಂದಿರುವ ಪ್ರಸ್ತುತ ಮಾಸಿಕದಲ್ಲಿ ಕಲಾಜಗತ್ತು ಚಿಣ್ಣರ ಬಿಂಬದ ರೂವಾರಿ ಡಾ ಸುರೇಂದ್ರ ಕುಮಾರ್ ಹೆಗ್ಡೆ , ಆಳ್ವಾಸ್ ಸಾಂಸ್ಕೃತಿಕ ಪ್ರತಿಷ್ಠಾನದ ಉಪನ್ಯಾಸಕಿ ಡಾ. ಸುಲತಾ ಹೆಗ್ಡೆ, ಕಾರ್ಕಳ SVT ವಿದ್ಯಾಸಂಸ್ಥೆಯ ನಿಕಟಪೂರ್ವ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಹಿರಿಯಡ್ಕ ಮೇಳದ ಹಿರಿಯ ಪ್ರಧಾನ ಭಾಗವತ ಸುಜಯ್ ಹೆಗ್ಡೆ ಕುತ್ಲೂರು, ಮುಂಬೈ ಕನ್ನಡ ಸಂಘಟನೆಯ ರವಿ ಹೆಗ್ಡೆ ಹೆರ್ಮುಂಡೆ, ಕನ್ನಡ ಚಲನಚಿತ್ರ ನಿರ್ದೇಶಕ ಕಿಶೋರ್ ಮೂಡುಬಿದಿರೆ ಸೇರಿದಂತೆ ಅನೇಕ ಖ್ಯಾತನಾಮರ ಲೇಖನದೊಂದಿಗೆ ಆರಂಭಗೊಂಡ ಪ್ರೇರಣಾ ಹೆಗ್ಗಡೆ ವಾಹಿನಿ ಪ್ರಾಯೋಗಿಕ ಸಂಚಿಕೆಯ ಯಶಸ್ಸಿನೊಂದಿಗೆ ಮಾ. 30 ತಾರೀಖಿಗೆ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ.

ಹೆಗ್ಗಡೆ ಸಮಾಜದ ಯುವ ತಂಡದಿಂದ ಪ್ರಾರಂಭಗೊಂಡ ಪ್ರೇರಣಾ ಹೆಗ್ಗಡೆ ವಾಹಿನಿ heggadevahini.com ವೆಬ್ ಸೈಟ್ ಮೂಲಕವೂ ಲಭ್ಯವಿದ್ದು ಮಾರ್ಚ್ 30ರಂದು ಮೊಬೈಲ್ ಅಪ್ಲಿಕೇಶನ್ ಉದ್ಘಾಟನೆಗೊಳ್ಳಲಿದೆ.

Exit mobile version