ಬೆಳ್ತಂಗಡಿ: ಜಮೀಯತುಲ್ ಫಲಾಹ್ ಘಟಕದ ವತಿಯಿಂದ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ಮತ್ತು ನಗದು ವಿತರಣೆ ಕಾರ್ಯಕ್ರಮ ಘಟಕದ ಅಧ್ಯಕ್ಷ ಶೇಕುಂಞ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಮದ್ದಡ್ಕ ಮಸೀದಿಯ ಮುಖ್ಯ ಗುರುಗಳಾದ ಹಾಫಿಲ್ ಮುಯೀನುದ್ದೀನ್ ಅಮ್ಜದಿ ಉಸ್ತಾದರು ಪ್ರಾರ್ಥನೆ ಸಲ್ಲಿಸಿದರು.
ಸುಮಾರು ಒಂದೂವರೆ ಲಕ್ಷ ರೂಪಾಯಿ ದಾನ (ಝಕಾತ್)ನೀಡಿದ ಅಬ್ದುಲ್ ಲತೀಫ್ ಹಾಜಿಯವರು ಮಾತನಾಡಿ ನಾವು ನಮಾಝ್ ಮಾಡಿದರೆ ಮಾತ್ರ ಸಾಲದು ಉಲ್ಲವರು ಇಲ್ಲದವರಿಗೆ ದಾನ (ಝಕಾತ್) ನೀಡುವುದು ಸಹಾ ಕಡ್ಡಾಯ ಕರ್ಮವಾಗಿದೆ ಎಂದರು.
ಅಧ್ಯಕ್ಷ ಶೇಕುಂಞ ಹಾಜಿಯವರು ಮಾತನಾಡಿ, ದಾನಿಗಳು ನಮ್ಮ ಮುಖಾಂತರ ನೀಡುವ ದಾನವು ಅರ್ಹ ಫಲಾನುಭವಿಗಳಿಗೆ ದೊರೆಯಬೇಕು ಎಂದರು. ಕಾರ್ಯದರ್ಶಿ ಆಲಿಯಬ್ಬ ಪುಲಾಬೆಯವರು ಸ್ವಾಗತಿಸಿದರು. ಉಮ್ಮರ್ ಅಹ್ಮದ್ ರವರು ಕಾರ್ಯಕ್ರಮ ನಿರೂಪಿಸಿದರು. ಉಮ್ಮರ್ ಕುಂಞ ಹಾಜಿ ನಾಡ್ಜೆಯವರು ಧನ್ಯವಾದ ಸಲ್ಲಿಸಿದರು.