ಮುಂಡಾಜೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಘಟಕ, ಯುವ ನಾಯಕ ಪ್ರಕಾಶ್ ನಾರಾಯಣ್ ರಾವ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರ, ಪ್ರಗತಿಪರ ಕೃಷಿಕ ರಾಘವ ಗೌಡ ಕುಡುಮಡ್ಕ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಕಜೆ ವೆಂಕಟೇಶ್ವರ ಭಟ್, ಅಜಯ್ ನೆರಿಯ, ಶಶಿಧರ್ ಕಲ್ಮಂಜ, ರಾಘವ ಕಲ್ಮಂಜ, ಚೆನ್ನಕೇಶವ ಅರಸಮಜಲು, ರವಿ ಪೂಜಾರಿ ಚಾರ್ಮಾಡಿ, ಶಿವಪ್ರಸಾದ್ ಗೌಡ ತೋಟತ್ತಾಡಿ, ಅಶ್ವಿನಿ ಹೆಬ್ಬಾರ್ ಮುಂಡಾಜೆ, ಮೋಹಿನಿ ಓಬಯ್ಯ ಗೌಡ ತೋಟತ್ತಾಡಿ, ಸುಮನ ಗೋಖಲೆ ಮುಂಡಾಜೆ ಆಯ್ಕೆಯಾದರು.
ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ ಗಳಿಸಿ ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಪಕ್ಷೇತರ 1 ಸ್ಥಾನ ಅಲಂಕರಿಸಿದ್ದಾರೆ. ಜ.19ರಂದು ಚುನಾವಣೆ ನಡೆದಿದ್ದು, ಸಿಡಿಓ ಪ್ರತಿಮಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಪ್ರಭು, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೋಟ್ಯಾನ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ನೂತನವಾಗಿ ರಚನೆಯಾದ ಆಡಳಿತ ಮಂಡಳಿಯನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತರಾಮ್ ಬೆಳಾಲು, ಚುನಾವಣಾ ಸಂಚಾಲಕ ಕೊರಗಪ್ಪ ಗೌಡ, ಸಹ ಸಂಚಾಲಕಿ ಪೂರ್ಣಿಮಾ, ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ, ಪ್ರಮುಖರಾದ ನಾರಾಯಣ ಫಡೈ,ವೆಂಕಟರಾಯ ಆಡೂರು,ಅನಂತ ಭಟ್ ಮಚ್ಚಿಮಲೆ, ಓಬಯ್ಯ ಗೌಡ ತೋಟತ್ತಾಡಿ,ಪ್ರಾನ್ಸಿಸ್ ವಿ.ಡಿ ತೋಟತ್ತಾಡಿ, ತೀಕ್ಷೀತ್ ದಿಡುಪೆ ಅಭಿನಂದಿಸಿದರು.