Site icon Suddi Belthangady

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಟರ್ಮ್ ಇನ್ಶೂರೆನ್ಸ್” ಕುರಿತು ಮಾಹಿತಿ ಕಾರ್ಯಗಾರ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಡೆಸುತ್ತಿರುವ ಎಲ್ ಸಿ ಆರ್ ಇಂಡಿಯನ್ ಪದವಿ ಕಾಲೇಜು ಇಲ್ಲಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಗೆ ಆರ್ಥಿಕ ರಕ್ಷಣೆಯನ್ನು ನೀಡುವ ಟರ್ಮ್ ಇನ್ಶೂರೆನ್ಸ್ ನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು ಎಂಬ ನಿಟ್ಟಿನಲ್ಲಿ “ಟರ್ಮ್ ಇನ್ಶೂರೆನ್ಸ್” ಕುರಿತು ಮಾಹಿತಿ ಕಾರ್ಯಗಾರವು ಮಾ.05ರಂದು ನಡೆಯಿತು.

ಈ ಕಾರ್ಯಗಾರದಲ್ಲಿ ಟರ್ಮ್ ಇನ್ಶೂರೆನ್ಸ್ ನ ಮಹತ್ವ, ವಿಮೆಯ ಉಪಯೋಗ, ಟರ್ಮ್ ವಿಮಾ ವಯಸ್ಸಿನ ಮಿತಿ ಮತ್ತು ಇತರ ಅವಶ್ಯಕತೆಗಳ ಪ್ರಾಮುಖ್ಯತೆ, ವಿಭಿನ್ನ ರೀತಿಯ ನೀತಿಗಳು, ತೀವ್ರ ಅನಾರೋಗ್ಯ ಮತ್ತು ಇತರ ಪ್ರಯೋಜನಗಳನ್ನು ಒಳಗೊಂಡಿತ್ತು. ಅದರೊಂದಿಗೆ ಪಾಲಿಸಿ ಬಜಾರ್ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ವಿಮೆಯನ್ನು ಖರೀದಿಸುವ ಲೈವ್ ಸೆಷನ್ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ಸಂಸ್ಥೆಯ ಸಂಯೋಜಕರಾದ ಯಶವಂತ ಜಿ ನಾಯಕ್ ಇವರು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ, ಪದವಿ ವಿಭಾಗದ ಮುಖ್ಯಸ್ಥ ದೀಕ್ಷಿತಾ.ಎ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ. ಎ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಗಾರವು ಯಶಸ್ವಿಯಾಗಿ ನಡೆಯಿತು.

Exit mobile version