ಬೆಳ್ತಂಗಡಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರುಗಡೆ ಇರುವ ಸೀಕ್ವೇರಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಎಸ್. ಎನ್. ಕಂಪ್ಯೂಟರ್ಸ್ ಸಂಸ್ಥೆಯು ಮಾ.6ರಿಂದ ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಎದುರುಗಡೆ ಇರುವ ನೂತನ್ ಡ್ರೆಸ್ಸೆಸ್‌ನ ಮೊದಲ ಮಹಡಿಗೆ ಸ್ಥಳಾಂತರಗೊಂಡು ಪುನರಾರಂಭಗೊಳ್ಳಲಿದೆ.
ನೂತನ ಸೈಬರ್ ಸೆಂಟರ್‌ನಲ್ಲಿ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವಿಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ, ಆರ್‌ಟಿಸಿ, ಜೆರಾಕ್ಸ್, ಕಲರ್ ಜೆರಾಕ್ಸ್ ಮತ್ತು ಪ್ರಿಂಟ್ ಹಾಗೂ ಎಲ್ಲಾ ತರಹದ ಆನ್ಲೈನ್ ಸೇವೆಗಳು ಲಭ್ಯವಿದೆ ಎಂದು ಮಾಲಕ ದಯಾನಂದ ನಾಯಕ್ ತಿಳಿಸಿದ್ದಾರೆ.