ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿ “Meaning Success:A project Evaluation ” ಕಾರ್ಯಕ್ರಮ ಜರುಗಿತು.
ಇದೊಂದು ಸಂಶೋಧನ ಅಧ್ಯಯನ ಕುರಿತಾದ ಮೌಲ್ಯಮಾಪನ ಕಾರ್ಯಕ್ರಮವಾಗಿದ್ದು, ಮಹಿಳೆಯರ ಮುಟ್ಟಿನ ಕುರಿತಂತೆಯ ಗ್ರಾಮೀಣ ಭಾಗದ ಮಹಿಳೆಯರಿಗೆ ಮಾಹಿತಿ ಒದಗಿಸುವ ಹಾಗೂ ಅರಿವು ಮೂಡಿಸುವ ಸಂಶೋಧನೆಯು ಇದಾಗಿದೆ.
ಕಾಲೇಜಿನ ಪ್ರಾoಶುಪಾಲರು ಸಂಶೋಧನೆಯ ಕುರಿತಂತೆ ಮಾತನಾಡಿ ಶುಭ ಹಾರೈಸಿದರು. ಪ್ರೊಫೆಸರ್ ಡೇವಿಡ್ ಲೆವಿನ್ ಇವರು ಸಂಶೋಧನೆಯ ಬಗ್ಗೆ ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿದರು ಹಾಗೂ ಮುಂದಿನ ಸಂಶೋಧನೆ ಯಲ್ಲಿನ ಬದಲಾವಣೆಗಳ ಬಗ್ಗೆಯು ವಿವರಣೆಯನ್ನು ನೀಡಿದರು.
ಪ್ರಾಧ್ಯಾಪಕಿ ಧನೇಶ್ವರಿ ಸಂಶೋಧನೆಯ ಕಿರು ಕುರಿತಂತೆ ವಿವರಣೆವನ್ನು ಪ್ರಸ್ತಾಪಿಸಿದರು. ಕಾಲೇಜಿನ ಪ್ರಾoಶುಪಾಲರದ ಪ್ರೊಫೆಸರ್ ವಿಶ್ವನಾಥ ಪಿ., ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ರವಿಶಂಕರ್ ಕೆ., ಹಾಗೂ ಅಮೆರಿಕಾದ (Californiya) ಕ್ಯಾಲಿಫೋರ್ನಿಯ ಯುನಿವರ್ಸಿಟಿಯ ಪ್ರೊ. ಡೇವಿಡ್ ಲೆವಿನ, ಜೊತೆಗೆ ಧರ್ಮಸ್ಥಳ ಜ್ಞಾನವಿಕಾಸ ಕೇಂದ್ರದ ರಾಜ್ಯಮಟ್ಟದ ಪ್ರಾಜೆಕ್ಟ್ ಆಫೀಸರ್ ಸಂಗೀತ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಧನೇಶ್ವರಿ ಹಾಗೂ ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಂಯೋಜಕರು, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಾಜ ಕಾರ್ಯವಿಭಾಗದ ಅಶ್ವಿನಿ ಸ್ವಾಗತಿಸಿ, ಪ್ರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ವೀಕ್ಷಿತಾ ಕೋಟ್ಯಾನ್ ಧನ್ಯವಾದವಿತ್ತರು.