ಬೆಳ್ತಂಗಡಿ: ಮಾ. 2ರಂದು ಕ್ಯಾಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ಹಾಗೂ ಮಂಜೊಟ್ಟಿ ಸ್ತ್ರೀ – ಮಂಡಳಿ ಇದರ ಜಂಟಿ ಆಶ್ರಯದಲ್ಲಿ ಮಂಜೊಟ್ಟಿ ಚರ್ಚ್ ವಠಾರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಆ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ವಲಯದ ಧರ್ಮಗುರುಗಳು ಫಾ. ವಾಲ್ಟರ್ ಓಸ್ಟಲ್ಡ್ ಡಿಮೆಲ್ಲೊ ಇವರು ಉದ್ಘಾಟಿಸಿ ಅಭಿನಂದನಾ ಮಾತುಗಳನ್ನಾಡುತ್ತಾ, ಸ್ತ್ರೀಯರ ಜವಾಬ್ದಾರಿ ಮಕ್ಕಳ ಪಾಲನೆ ಪೋಷಣೆಯ ಬಗ್ಗೆ ಅರಿವು ಮೂಡಿಸುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ಬೆಳ್ತಂಗಡಿ ವಲಯಾಧ್ಯಕ್ಷರು ಗ್ರೇಸಿ ಲೋಬೊ, ಮುಖ್ಯ ಅತಿಥಿಯಾಗಿ ಮಂಜೊಟ್ಟಿ ಚರ್ಚ್ ನ ಧರ್ಮಗುರುಗಳಾದ ಫಾ. ಪ್ರವೀಣ್ ಡಿಸೋಜ, ಉಜಿರೆ ಚರ್ಚ್ ನಾ ಧರ್ಮಗುರುಗಳು ಹಾಗೆಯೇ ವಲಯ ಸ್ತ್ರೀ ಮಂಡಳಿಯ ನಿರ್ದೇಶಕ ಫಾ. ಅಬೆಲ್ ಲೋಬೊ, ವಲಯ ಕಾರ್ಯದರ್ಶಿ ಆಶು ಜುಲಿಯೆಟ್, ಮಂಜೊಟ್ಟಿ ಘಟಕದ ಅಧ್ಯಕ್ಷೆ ವಿನ್ನಿ ಡಿಸೋಜಾ, ಮಂಜೊಟ್ಟಿ ಚರ್ಚ್ ಪಾಲನಾ ಪರಿಷತ್ನ ಉಪಾಧ್ಯಕ್ಷರು ಮಾರ್ಕ್ ಡಿಸೋಜ, ಕಾರ್ಯದರ್ಶಿ ಐರಿನ್ ಸಿಕ್ವೇರಾ, ಸಂಯೋಜಕ ವಿನೋದ್ ಪಿಂಟೊ ಉಪಸ್ಥಿತರಾಗಿದ್ದರು. ಅಧ್ಯಕ್ಷ ಶ್ರೀಮತಿ ಗ್ರೇಸಿ ಲೋಬೊ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಶ್ರೀಮತಿ ಆಶು ಜೂಲಿಯೆಟ್ ವರದಿ ವಾಚಿಸಿದರು.
ಜಾನೆಟ್ ಡಿಸೋಜ ಹಾಗೂ ಝೀಟಾ ಕ್ರಾಸ್ತಾ ನಾರಾವಿ ಕಾರ್ಯನಿರ್ವಹಿಸಿದರು. ವಲಯದ 12 ಘಟಕದ ಸ್ತ್ರೀ ಮಂಡಳಿ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ವಲಯ ಸಹಕಾರ್ಯದರ್ಶಿ ಜೆತ್ರುಡ್ ಡಿಸೋಜಾ ಧನ್ಯವಾದವಿತ್ತರು.