Site icon Suddi Belthangady

ಶ್ರೀ ರಾಮ ಕ್ಷೇತ್ರ ಭಟ್ಕಳ ಕರಿಕಲ್ ಧ್ಯಾನ ಮಂದಿರದಲ್ಲಿ ವರ್ಧಂತಿ ಉತ್ಸವ

ಬೆಳ್ತಂಗಡಿ: ಅಗತ್ಯಕ್ಕಿಂತ ಹೆಚ್ಚು ಚಿಂತನೆ ಮಾಡುವುದದಿಂದ ಮಾನವ ತನ್ನ ಆರೋಗ್ಯವನ್ನು ಹಾಗೂ ಆಧ್ಯಾತ್ಮ ಚಿಂತನೆಗಳನ್ನು ನಾಶಮಾಡಿಕೊಳ್ಳುತ್ತಾನೆ ಎಂದು ಶ್ರೀರಾಮ ಕ್ಷೇತ್ರದ ಮಠಾಧೀಶ 1008 ಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಮಾ. 4ರಂದು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಭಟ್ಕಳ ಕರಿಕಲ್ ಧ್ಯಾನ ಮಂದಿರದ ವರ್ಧಂತಿ ಉತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರದ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.

ಇಂದು ಮಾನವ ತನ್ನ ಬಗ್ಗೆ ಚಿಂತನೆ ಮಾಡದೆ ಪರರ ಬಗ್ಗೆ ಸದಾ ಚಿಂತನೆ ನಡೆಸುತ್ತಾ ಬೇರೆಯವರನ್ನು ದೂಷಿಸುತ್ತಾ ತನ್ನ ಶಕ್ತಿಯನ್ನು ಹಾಗೂ ಆರೋಗ್ಯವನ್ನು ನಾಶಪಡಿಸಿಕೊಳ್ಳುತ್ತಿದ್ದಾನೆ. ಮಾನವನಿಗೆ ಹಣ ಮತ್ತು ಅಧಿಕಾರ ಬಂದಾಗ ತನ್ನ ಕರ್ತವ್ಯವನ್ನು ಮರೆಯುತ್ತಾನೆ.

ಹಣ ಮತ್ತು ಗೌರವ ಭಗವಂತನ ಕೃಪೆಯಿಂದ ಸಿಗುವುದೇ ಹೊರತು ನಮ್ಮ ಪ್ರಯತ್ನದಿಂದ ಯಾವುದೂ ಸಿಗುವುದಿಲ್ಲ ಎಂದ ಅವರು ಎಲ್ಲರನ್ನು ಪ್ರೀತಿಸಿ ಗೌರವಿಸಿ ಧರ್ಮವನ್ನು ಕಾಪಾಡಬೇಕು ಎಂದರು.

ಧಾರ್ಮಿಕ ಸಭೆಯ ಮೊದಲು ಭಟ್ಕಳ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯರು ಹಾಗೂ ಸಾರದಹೊಳೆ ಶ್ರೀ ಹಳೇಕೋಟೆ ಹನುಮಂತ ದೇವಸ್ತಾನದ ಆಡಿಳಿತ ಮಂಡಳಿಯ ವತಿಯಿಂದ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು.

ಧಾರ್ಮಿಕ ಸಭೆಯಲ್ಲಿ ರಾಜ್ಯ ಸರಕಾರದ ಮೀನುಗಾರಿಕಾ ಬಂದರು ಸಚಿವ ಮಂಕಾಳ ವೈದ್ಯ, ಜಿಲ್ಲೆಯ ವಿವಿದೆಡೆಯಿಂದ ಬಂದ ನಾಮಧಾರಿ ಸಮಾಜದ ಮುಖಂಡರು, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪ್ರಮುಖರು ಹಾಜರಿದ್ದರು.

ವರ್ಧಂತಿ ಉತ್ಸವದ ಅಂಗವಾಗಿ ಬೆಳಿಗ್ಗೆ ಕರಿಕಲ್ ದ್ಯಾನ ಮಂದಿರದಲ್ಲಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀರಾಮತಾರಕ ಮಹಾಯಜ್ಞ ನಡೆಯಿತು.

ನಂತರ ಭಕ್ತಮಂಡಳಿಯವರಿಂದ ದ ಭಜನೆ , ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ನೆರವೇರಿತು.

ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್. ಕೆ. ನಾಯ್ಕ, ಪ್ರಮುಖರಾದ ಡಿ.ಎಲ್. ನಾಯ್ಕ, ವಾಸು ನಾಯ್ಕ, ಸುಬ್ರಾಯ ನಾಯ್ಕ, ವಾಮನ ನಾಯ್ಕ, ಮಂಕಿ, ಗೋವಿಂದ ನಾಯ್ಕ ಹೊನ್ನಾವರ, ಆರ್. ಎಚ್. ನಾಯ್ಕ ಕುಮಟಾ, ಮಂಜುನಾಥ ನಾಯ್ಕ, ಹೊನ್ನಾವರ, ಅರವಿಂದ ಪೂಜಾರಿ ಬೈಂದೂರು, ಡಿ.ಬಿ.ನಾಯ್ಕ,ಬೆಳ್ತಂಗಡಿ ಶ್ರೀ ರಾಮ ಕ್ಷೇತ್ರ ಸಮಿತಿಯ ಸಂಚಾಲಕ ಜಯಂತ ಕೋಟ್ಯಾನ್, ಅಧ್ಯಕ್ಷ, ಸದಾನಂದ ಪೂಜಾರಿ, ಪ್ರಶಾಂತ್ ಪಾರೆಂಕಿ, ರಾಜೇಶ್ ಪೂಜಾರಿ ಮೂಡುಕೋಡಿ, ಶ್ರೀ ರಾಮ ಕ್ಷೇತ್ರದ ಟ್ರಷ್ಟಿ ತುಕಾರಾಮ ಸಾಲಿಯಾನ್, ರವೀಂದ್ರ ಪೂಜಾರಿ ಆರ್ಲ, ದಯಾನಂದ ಪಿ. ಬೆಳಾಲು, ಕನ್ಯಾಡಿ ರಥ ಬೀದಿ ವ್ಯಾಪಾರಸ್ಥರು,ಜಿಲ್ಲೆಯ ವಿವಿದೆಡೆಯ ಮುಖಂಡರು, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪ್ರಮುಖರು ಹಾಜರಿದ್ದರು.

ಭಟ್ಕಳ ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Exit mobile version