ನೆರಿಯ: ನೆರಿಯ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಪ್ರತೀ ವರ್ಷದಂತೆ ನೀಡುತ್ತಿರುವ ಮಡಂತ್ಯಾರ್ ಜೆರಾಲ್ಡ್ ಕೊರೆಯರವರ ಪುತ್ರ ಅಮರ್ ಕೊರೆಯ ಅಪಘಾತದಲ್ಲಿ ನಿಧನರಾಗಿ ಮಾ. 4ರಂದು 10ನೇ ವರ್ಷ ಪೂರೈಸಿದ ಸವಿ ನೆನಪಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಆಶ್ರಮವಾಶಿಗಳೊಂದಿಗೆ ಭೋಜನ ಕೂಟ ಏರ್ಪಡಿಸಲಾಯಿತು.
ವಿಶೇಷ ಭೋಜನ ಕೂಟದಲ್ಲಿ ದಿ. ಅಮರ್ ಕೊರೆಯಾರ ತಂದೆ ಜೆರಾಲ್ಡ್ ಕೊರೆಯ, ಸಿಯೋನ್ ಆಶ್ರಮ ಟ್ರಸ್ಟಿ ಯು.ಸಿ ಪೌಲೋಸ್, ಎಲ್. ಐ. ಸಿ ನಿವೃತ್ತ ಅಭಿವೃಧ್ಧಿ ಅಧಿಕಾರಿ ಜಯದೇವ್, ವಿನ್ಸೆಂಟ್ ಡಿಸೋಜಾ, ಮೆಲ್ವಿನ್ ಕೊರೆಯಾ, ಆಲ್ಫೋನ್ಸ್ ಪಾಯಿಸ್, ವಿನ್ಸೆಂಟ್ ಮೊರಾಸ್, ಜೋರ್ಜ್ ಅಂದ್ರದೇ, ಅನಿತಾ ಕೊರೆಯ, ಗ್ರೆಸಿ ಕೊರೆಯ, ಮಾರ್ಸೆಲ್ ಡಿಸೋಜಾ, ಡಾಲ್ಪಿ ಸಿಕ್ವೇರಾ, ಅವಿಲ್ ಡಿಸೋಜಾ, ವಿಲಿಯಂ ಕಾರ್ಲ್, ರಾಜೇಶ್ ವಾಸ್, ಅರುಣ್ ಪಿಂಟೊ, ವೆಲಂಕಣಿ ಕೇಟರಿಂಗ್ ಮಾಲಕ ಲ್ಯಾನ್ಸಿ ಮೋನಿಸ್, ಸಿಯೊನ್ ಸಂಪರ್ಕಾಧಿಕಾರಿ ರಿತೇಶ್, ಪೌಲೊಸ್ ರವರ ಪುತ್ರಿ ಸೌಮ್ಯ, ಎಸ್.ಕೆ.ಆರ್.ಡಿ.ಡಿ.ಪಿ. ವಲಯ ಮೇಲ್ವಿಚಾರಕರಾದ ಶಶಿಕಲಾ ಮತ್ತು ಸುಮಿತ್ರ ಹಾಗೂ ಸಿಬ್ಬಂದಿಯವರು, ಆಶ್ರಮ ಟ್ರಸ್ಟಿಗಳು ಉಪಸ್ಥಿತರಿದ್ದು, ಮೃತ ಅಮರ್ ಕೊರೆಯ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿದರು. ವಿನ್ಸೆಂಟ್ ಮೊರಾಸ್ ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.